ಅಂಕೋಲಾ: ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶನದಂತೆ ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್‌ನ ಬಾಳೆಗುಳಿ ಗ್ರಾಮದಲ್ಲಿ ‘ನರೇಗಾ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ’ದಡಿ ‘ರೋಜಗಾರ್ ದಿವಸ್’ ಹಾಗೂ ‘ಮನೆ ಮನೆ ಭೇಟಿ’ ಕೈಗೊಳ್ಳಲಾಯಿತು.
ಮನೆ ಮನೆ ಭೇಟಿ ನೀಡಿ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳ ಮಾಹಿತಿ ಹೊಂದಿರುವ ಕರಪತ್ರಗಳನ್ನು ವಿತರಿಸಲಾಯಿತು. ಜೊತೆಗೆ ಕಾಮಗಾರಿ ಬೇಡಿಕೆಯನ್ನು ಪಡೆದು ಕೂಲಿ ಪಡೆಯುವಂತೆ ಮಾಹಿತಿ ನೀಡಲಾಯಿತು.
ಗ್ರಾಮಸ್ಥರು ಯಾವುದೇ ಬೇಡಿಕೆಗಳಿದ್ದರೂ ಗ್ರಾಮ ಪಂಚಾಯತ್‌ಕ್ಕೆ ಅರ್ಜಿ ನೀಡಬಹುದು ಅಲ್ಲದೇ ಗ್ರಾಮಸಭೆ ಮತ್ತು ಸಾಮಾನ್ಯ ಸಭೆಗಳಲ್ಲಿ ತಿಳಿಸಬಹುದಾಗಿದ್ದು ಖಾತರಿ ಕೆಲಸದ ಸಂಪೂರ್ಣ ಸದುಪಯೋಗ ಪಡೆಯಿರಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ ತಳವಾರ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ವಾಸಿಸುವ ಪ್ರತಿಯೊಂದು ಅರ್ಹ ಕುಟುಂಬವು ವಾರ್ಷಿಕವಾಗಿ 100 ದಿನಗಳ ಕೆಲಸದೊಂದಿಗೆ 316 ಕೂಲಿ ನೀಡಲಾಗುತ್ತದೆ ಹಾಗೂ ಪ್ರತಿ ಕುಟುಂಬವು ಜೀವಿತಾಧಿಗೆ 5ಲಕ್ಷದವರೆಗೆ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯಧನ ಪಡೆಯಬಹುದಾಗಿದೆ ಎಂದು ತಾಲೂಕು ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂಚಾಯತ್ ಎಸ್‌ಡಿಎ, ಸಿಬ್ಬಂದಿ ವರ್ಗದವರು ಹಾಜರಿದ್ದರು.