Slide
Slide
Slide
previous arrow
next arrow

ಸಿಎಂ ಕಪ್ ವುಶು ಲೀಗ್: ಹೊನ್ನಾವರದ ಅಲೋಕ್‌ಗೆ ಕಂಚಿನ ಪದಕ

300x250 AD

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ ನಾಗೇಂದ್ರ ನಾಯ್ಕ ದಸರಾ ಸಿಎಂ ಕಪ್ 2023ರ ವುಶು ಲೀಗ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ನಡೆಸಿರುವ ದಸರಾ ಕ್ರೀಡಾಕೂಟ ಸಿ.ಎಂ. ಕಪ್ 2023ರ ವುಶು ಲೀಗ್ ಸೀನಿಯರ್ ಶಾನ್ಸು ಕ್ರೀಡೆಯ 65 ಕೆ.ಜಿ. ಒಳಗಿನ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ವುಶು ಅಸೋಸಿಯೇಷನ್ ಜನರಲ್ ಸೆಕ್ರಟರಿಯಾದ ರಾಘವೇಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರನಾದ ಇವರು ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾನೆ.

300x250 AD

ಇವರ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ.ಶಿಲ್ಪಾ ಎಚ್.ಆರ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ತರಬೇತುದಾರ ರಾಘವೇಂದ್ರ ಹೊನ್ನಾವರ ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top