Slide
Slide
Slide
previous arrow
next arrow

ಅ.27ಕ್ಕೆ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

300x250 AD

ಕುಮಟಾ: ಇಲ್ಲಿನ ಬಗ್ಗೋಣ ರಸ್ತೆಯ ನಾಮಧಾರಿ ಸಭಾಭವನ ಪಕ್ಕದ ವನವಾಸಿ ಕಲ್ಯಾಣ ವಸತಿ ನಿಲಯದಲ್ಲಿ ಅಕ್ಟೋಬರ್ 27 ರಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 4:00ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋ ಸೇವಾಗತಿ ವಿಧಿ ಹಾಗೂ ವನವಾಸಿ ಕಲ್ಯಾಣ ಆಶ್ರಮ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಜ್ವರ, ರಕ್ತದೊತ್ತಡ, ಸಿಹಿಮೂತ್ರ, ವಾಂತಿಭೇದಿ, ಮೂಲವ್ಯಾಧಿ, ಅಲರ್ಜಿ, ಸಂಧಿವಾತ, ನೆಗಡಿ, ಮೈಕೈನೋವು, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆ, ನಿದ್ರಾಹೀನತೆ, ಸೋರಿಯಾಸಿಸ್, ಅರೆತಲೆನೋವು, ಚರ್ಮರೋಗ, ಮೂರ್ಛೆರೋಗ, ಅಶಕ್ತತೆ, ದೃಷ್ಟಿನೇತ್ರ ಸಮಸ್ಯೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬುದ್ಧಿಮಾಂದ್ಯತೆ, ನರಗಳ ದೌರ್ಬಲ್ಯ, ಸ್ತ್ರೀ ರೋಗಗಳು ಹೀಗೆ ಬಹುತೇಕ ಎಲ್ಲ ರೋಗಗಳಿಗೆ ಪಂಚಗವ್ಯ ಔಷಧಿಗಳಲ್ಲಿ ಅದ್ಭುತ ಪರಿಣಾಮದ ಶಕ್ತಿ ಇರುವುದು.
ಪಂಚಗವ್ಯ ಆಯುರ್ವೇದ ಔಷಧಿಗಳಲ್ಲಿ ಆಳವಾಗಿ ಅಧ್ಯಯನ ಮಾಡಿದ ಪ್ರಸಿದ್ಧ ವೈದ್ಯ, ಶ್ರೀ ರಾಮಚಂದ್ರಾಪುರ ಮಠದ ಮಾಗೋ ಪ್ರಾಡಕ್ಟ್ಸ್ ಕಂಪನಿಯಲ್ಲಿ ಪಂಚಗವ್ಯ ಔಷಧಿಗಳ ತಾಂತ್ರಿಕ ಸಲಹೆಗಾರರಾದ ಡಾಕ್ಟರ್ ಡಿ.ಪಿ.ರಮೇಶ್ ಬೆಂಗಳೂರು ಇವರು ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ.

ಶಿಬಿರದ ಸ್ಥಳದಲ್ಲಿ ಗವ್ಯೋತ್ಪನ್ನ ವಸ್ತುಗಳು ಮತ್ತು ಔಷಧಿಗಳು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಸುರೇಶ್ ಹೆಗಡೆ –Tel:+919480341523, ಮೋಹನ್ ಗುನಗಾ Tel:+918277116461, ವಿಶ್ವೇಶ್ವರ ಹೆಗಡೆ Tel:+919483618034 ಸಂಪರ್ಕಿಸಲು ಕೋರಿದೆ.

300x250 AD


Share This
300x250 AD
300x250 AD
300x250 AD
Back to top