Slide
Slide
Slide
previous arrow
next arrow

ಗೋವಾ ಸಾರಾಯಿ ಅಕ್ರಮ ಸಾಗಾಟ: ಆರೋಪಿ ಬಂಧನ

300x250 AD

ಜೋಯಿಡಾ: ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೈಕ್ ಮತ್ತು ಸಾರಾಯಿ ಸಮೇತ ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಹಾವೇರಿಯ ನೆದರಲಿ ಅಬ್ಬಾಸ್ ಅಲಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. KA 27EK 1046 ಸಂಖ್ಯೆಯ ಬೈಕ್’ನಲ್ಲಿದ್ದ ಸುಮಾರು 54 ಲೀ. ಸಾರಾಯಿ ಹಾಗೂ ವಾಹನ ಸೇರಿ ಒಟ್ಟೂ ಅಂದಾಜು ಮೌಲ್ಯ 50000 ರೂ.ಗಳದ್ದಾಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

300x250 AD

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಹಾಗೂ ಅಬಕಾರಿ ಉಪ ಅಧಿಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಉಪನಿರೀಕ್ಷಕ ಮಂಜುಕುಮಾರ ನಾಯ್ಕ, ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ಸದಾಶಿವ ರಾಥೋಡ,ಈರಣ್ಣ ಕುರುಬೇಟ್, ಆರ್,ಎನ್ ನಾಯಕ, ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top