Slide
Slide
Slide
previous arrow
next arrow

ಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿ: ಫೋನಿಕ್ಸ್ ಸ್ಮಾಶರ್ ತಂಡ ಪ್ರಥಮ

300x250 AD

ಶಿರಸಿ : ನಗರದ ಅರಣ್ಯ ಭವನದಲ್ಲಿ ಶಿರಸಿ ಶಟ್ಲರ್ಸ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಫೋನಿಕ್ಸ್ ಸ್ಮಾಶರ್ ವಿಜೇತ ತಂಡವಾಗಿ ಹೊರಹೊಮ್ಮಿದ್ದು, ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ‌ ನೀಡಲಾಯಿತು.

ಕಳೆದ‌ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಮಂಜುನಾಥ್ ರಾವ್ ಮತ್ತು ನಿರಂಜನ್ ಹೆಗಡೆ ಮಾಲಕತ್ವದ ತಂಡವಾದ ಫೀನಿಕ್ಸ್ ಮ್ಯಾಶರ್ ತಂಡ ಗೆದ್ದುಕೊಂಡಿತು. ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಗಿರಿ ಕಲ್ಗಾರ್ ನೇತೃತ್ವದ ಟೀಮ್-ಜಿ ಮತ್ತು ಫೋನಿಕ್ಸ್ ಸ್ಮಾಶರ್ ತಂಡ ಆಟ ಆಡಿದವು. ಕೊನೆಯಲ್ಲಿ 5-4 ಅಂಕಗಳ ಅಂತರದಲ್ಲಿ ಫಿನಿಕ್ಸ್ ಸ್ಮಾಶರ್ ತಂಡ ಫೈನಲ್ ಪಂದ್ಯವನ್ನು ಗೆದ್ದು ಬೀಗಿತು.

ಪೋನೆಕ್ಸ್ ಸ್ಮಾಶರ್, ಟೀಮ್ ಜಿ, ಹವ್ಯಕ ಪಂಟರ‍್ಸ, ಮಹಾ ಹವ್ಯಕ ರೊಕೇಟ್ಸ್ ತಂಡವು ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪಾಲ್ಗೊಂಡಿದ್ದು, ಪ್ರತಿ ತಂಡದಲ್ಲಿ 15 ಆಟಗಾರರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ರಾಜ್ಯ ಮಟ್ಟದ ಆಹ್ವಾನಿತ ಕ್ರೀಡಾಳುಗಳು ಸುಮಾರು 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

300x250 AD

ಮೊದಲಿಗೆ ಶನಿವಾರ ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಪ್ರಗತಿ ಟ್ರೇಡರ್ಸ್ ಲೋಕೇಶ ಹೆಗಡೆ ಉದ್ಘಾಟಿಸಿದರು. ಭಾನುವಾರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಅಡಿಕೆ ವರ್ತಕ ಲೋಕೇಶ್ ಹೆಗಡೆ, ಡ್ರಗಿಸ್ಟ್ ಅಂಡ್ ಕೆಮಿಸ್ಟ್ ಸಂಘದ ಅಧ್ಯಕ್ಷರಾದ ಗಣೇಶ್ ಹೆಗಡೆ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಆಯೋಜಕರ ಪರವಾಗಿ ಗಣಪತಿ ಹೆಗಡೆ ನಿರ್ವಹಿಸಿದರು. ಸಾರ್ವಜನಿಕರು ಕ್ರೀಡಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ರೋಚಕ ಪಂದ್ಯಗಳಿಗೆ ಸಾಕ್ಷಿಯಾದರು.

Share This
300x250 AD
300x250 AD
300x250 AD
Back to top