Slide
Slide
Slide
previous arrow
next arrow

ಲಯನ್ ಜಿ.ಎಸ್.ಹೆಗಡೆ ಬಸವನಕಟ್ಟೆ ವಿಧಿವಶ

300x250 AD

ಶಿರಸಿ: ಶಿರಸಿಯ ವಿವಿಧ ಸಂಘಸಂಸ್ಥೆಗಳ ಮೂಲಕ ಸುದೀರ್ಘ ಸಮಾಜ ಸೇವೆಗೈದು ಪ್ರಖ್ಯಾತರಾಗಿದ್ದ ಲಯನ್ ಜಿ.ಎಸ್ ಹೆಗಡೆ ಬಸವನಕಟ್ಟೆ ಇಹಲೋಕ ತ್ಯಜಿಸಿ ತಮ್ಮ ಅಪಾರ ಬಂಧುಬಳಗವನ್ನು ತೊರೆದಿದ್ದಾರೆ.

ತಮ್ಮ ಶಿಕ್ಷಣದ ನಂತರ ಆವೇಮೆರಿಯಾ ಸಂಸ್ಥೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು, ನಂತರ ಕರ್ನಾಟಕ ಸರಕಾರದ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ವೃತ್ತಿಪರ ತರಬೇತಿ ವಿದ್ಯಾಪೀಠಗಳ ಪ್ರಾಂಶುಪಾಲರಾಗಿ ಬೆಂಗಳೂರು, ಮೂಡಗೆರೆ, ಶಿವಮೊಗ್ಗ,ತರಿಕೆರೆ, ಬನವಾಸಿಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿದರು. ತದನಂತರ ಶಿಕ್ಷಣ ಇಲಾಖೆಯಲ್ಲಿ ಯೋಜನಾಧಿಕಾರಿಯಾಗಿ ಹಳೇ ಮೈಸೂರು ಪ್ರಾಂತದಲ್ಲಿ ಅಮೋಘ ಸೇವೆ ಸಲ್ಲಿಸಿ, 1986-87 ರಲ್ಲಿ ಕರ್ನಾಟಕ ರಾಜ್ಯದ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನು ಶಿಕ್ಷಣ ಮಂತ್ರಿಯಿಂದ ಪಡೆದಿದ್ದರು. ಸೇವಾ ನಿವೃತ್ತಿಯ ನಂತರ ಶಿರಸಿ ಲಯನ್ಸ್ ಸಂಸ್ಥೆಯ ಸಂಸ್ಥಾಪಕರಾಗಿ ಸೇರಿ ಸಂಸ್ಥೆಯ ಅಧ್ಯಕ್ಷರಾಗಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಲ್ಲದೆ ತನ್ಮಧ್ಯದಲ್ಲಿ ಶಿವಮೊಗ್ಗ ಲಯನ್ಸ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

300x250 AD

ಶಿರಸಿ ಲಯನ್ಸ್ ಶಾಲಾ ಸಮೂಹಗಳ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಇದಲ್ಲದೆ ಶಿರಸಿ ನಿವೃತ್ತ ನೌಕರರ ಸಂಘದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ ಬಹಳ ದೀರ್ಘ ಕಾಲದವರೆಗೆ ಶಿರಸಿಯ ಅರವಿಂದ ಅಭ್ಯಾಸ ಮಂಡಳಿಯಲ್ಲಿ ಗೌರವ ಕಾರ್ಯದರ್ಶಿಗಳಾಗಿ ಅಮೋಘ ಸೇವೆ ಸಲ್ಲಿಸಿ,ಜನಮಾನಸದಲ್ಲಿ ಚಿರಪರಿಚಿತರಾಗಿ ನೆಲೆನಿಂತಿದ್ದಾರೆ.ಅವರ ಅಗಲಿಕೆ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

Share This
300x250 AD
300x250 AD
300x250 AD
Back to top