
ಭಟ್ಕಳ: ತಾಲೂಕಿನ ದೊಡ್ಡಹಿತ್ಲು , ಕೋಡಖಂಡದಲ್ಲಿ ‘ನಾದೋಪಾಸನಾ’ ಸಂಗೀತ ಕಾರ್ಯಕ್ರಮವು ಅ.24, ಮಂಗಳವಾರ ಸಂಜೆ 4 ಗಂಟೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ವಿ. ವಸುಧಾ ಶರ್ಮಾ ಸಾಗರ ಗಾನಸುಧೆ ಹರಿಸಲಿದ್ದು, ಇವರಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು, ಪಖಾವಾಜ್’ನಲ್ಲಿ ರಾಘವೇಂದ್ರ ಹೆಬ್ಬಾರ್, ಮಂಜಿರಾದಲ್ಲಿ ಗಣೇಶ್ ಹೆಬ್ಬಾರ್ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಸಂಗೀತಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.