Slide
Slide
Slide
previous arrow
next arrow

ಮುರ್ಡೇಶ್ವರ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಮೂವರ ರಕ್ಷಣೆ

300x250 AD

ಭಟ್ಕಳ: ಇಲ್ಲಿನ ಮುರ್ಡೇಶ್ವರ ಕಡಲತೀರದಲ್ಲಿ ನೀರು ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಿದ ಘಟನೆ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22) ಅಪಾಯದಿಂದ ಪಾರಾದವರಾಗಿದ್ದು, ಇವರು ದಸರಾ ರಜೆ ಹಿನ್ನೆಲೆ ಪ್ರವಾಸಕ್ಕೆಂದು ಬಾಗಲಕೋಟೆಯಿಂದ ಮುರುಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕಿಳಿದಿದ್ದ ಯುವಕರು ಅಪಾಯಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ಶಶಿ, ಪಾಂಡು, ರಾಮಚಂದ್ರ ಕೂಡಲೇ ಅವರನ್ನು ರಕ್ಷಿಸಿದ್ದಾರೆ.

ಅಸ್ವಸ್ಥಗೊಂಡಿದ್ದ ಯುವಕರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು, ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top