Slide
Slide
Slide
previous arrow
next arrow

ಕಸ್ತೂರಿ ರಂಗನ್ ವಿರೋಧಿಸಿ ಗ್ರಾ.ಪಂ ಸಭೆಯಲ್ಲಿ ತೀರ್ಮಾನಿಸಲು ಮನವಿ

300x250 AD

ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನ ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಶಿರಸಿ ತಾಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮನವಿ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಯಿತು.

 ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಶಿರಸಿ ತಾಲೂಕಿನ, 29 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, 125 ಹಳ್ಳಿಗಳನ್ನ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದ್ದು, ಇವುಗಳನ್ನ ಪರಿಸರ ಸೂಕ್ಷ್ಮ ಪ್ರದೇಶದಿಂದ ಮುಕ್ತಗೊಳಿಸಲು ನಿರ್ಣಯಿಸಲು ಅವರು ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಆಗ್ರಹಿಸಿದರು.

 ಶಿರಸಿ ತಾಲೂಕಿನ, ಬಂಕನಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಜಾತ ಎಮ್ ನಾಯ್ಕ ಅವರಿಗೆ  ನಿರ್ಣಯಿಸಲು ಆಗ್ರಹಿಸಿ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲಾ ಸಂಚಾಲಕರಾದ ನೇಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಶಶಿಧರ ಬಿ ನಾಯ್ಕ ಉಮ್ಮಾಡಿ, ಸ್ವಾತಿ ಆರ್ ಜೈನ್, ರಾಜೇಶ ಜಿ ನಾಯ್ಕ ಕಂಡ್ರಾಜಿ, ರಾಮಣ್ಣ ಬಿ ನಾಯ್ಕ ಕಾಯಗುಡ್ಡೆ, ಶಿವು ಗೌಡ್ರು ಕೊಟೆಕೊಪ್ಪ, ಮಂಜುನಾಥ ಆರ್ ನಾಯ್ಕ ಕಾಯಗುಡ್ಡೆ ಮುಂತಾದವರ ನಿಯೋಗವು ಇಂದು ಮನವಿ ನೀಡಿತು.

300x250 AD

ಉಪಾಧ್ಯಕ್ಷರಾದ ಗಿರಿಜಮ್ಮ ಕೊರವರ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಶೇಷ ನಾಯ್ಕ, ಶಶಿಧರ ಬಿ ನಾಯ್ಕ ಉಮ್ಮಾಡಿ ಉಪಸ್ಥಿತರಿದ್ದರು.

ಶಿರಸಿ ತಾಲೂಕ- 125 ಪರಿಸರ ಸೂಕ್ಷ್ಮ ಹಳ್ಳಿಗಳು:
 ಶಿರಸಿ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯಿತಿಯಲ್ಲಿ 7 ಹಳ್ಳಿ, ಜಾನ್ಮನೆ 9 ಹಳ್ಳಿ, ಬಿಸಲಕೊಪ್ಪ 8, ಬಂಕನಾಳ 6, ದೇವನಳ್ಳಿ 5, ಸಾಲ್ಕಣಿ 6, ಉಂಚಳ್ಳಿ 6, ಬಂಡಲ 6, ಇಸಳೂರು 5, ಶಿವಳ್ಳಿ 5, ಹಾರೆಹುಲೇಕಲ್ 4, ಸುಗಾವಿ 4, ನೆಗ್ಗು 4, ಮಂಜಗುಣಿ 4, ಗುಡ್ನಾಪುರ 3, ಹುಣಸೆಕೊಪ್ಪ 3, ದೊಡ್ನಳ್ಳಿ 3, ಸದಾಶಿವಳ್ಳಿ(ತಾರಗೋಡ) 2, ಯಡಳ್ಳಿ 3, ಭೈರುಂಬೆ 2, ಅಂಡಗಿ 2, ಕೋಡ್ನಗದ್ದೆ 2, ಮೇಲಿನ ಓಣಿಕೇರಿ 3, ಸೊಂದಾ 3, ಬನವಾಸಿ 1, ಬಾಶಿ 1, ಹಲಗದ್ದೆ(ಕೋರ್ಲಕಟ್ಟಾ) 1, ಇಟಗುಳಿ 1, ಕುಳವೆ 1 ಹಳ್ಳಿ ಹೀಗೆ ಶಿರಸಿ ತಾಲೂಕಿನಲ್ಲಿ ಒಟ್ಟು 125 ಹಳ್ಳಿಗಳು ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top