Slide
Slide
Slide
previous arrow
next arrow

ಪತ್ನಿ ಕತ್ತು ಸೀಳಿ ಕೊಲೆಗೈದ ಪತಿ: ಬಂಧನ

300x250 AD

ಭಟ್ಕಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ.

ಮುರ್ಡೇಶ್ವರ ನಿವಾಸಿ ನಂದಿಸಿ ಲೋಕೇಶ ನಾಯ್ಕ(30) ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆ ಮಾಡಿದ ಆರೋಪಿ ಪತಿ ಲೋಕೇಶ ನಾಯ್ಕ(34)ನನ್ನು ಸೆರೆ ಹಿಡಿಯಲಾಗಿದೆ.

ಶಿಲ್ಪಿ ಕೆಲಸ ಮಾಡುತ್ತಿದ್ದ ಮುರ್ಡೇಶ್ವರ ನಾಡವರ ಕೇರಿ ನಿವಾಸಿ ಲೋಕೇಶ ಹಾಗೂ ನಂದಿನಿಯ ನಡುವೆ ಕೌಟುಂಬಿಕ ಕಾರಣಗಳಿಂದ ಕಲಹವಿತ್ತು. ದಂಪತಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳು ಇದ್ದಾರೆ.

300x250 AD

ಕಳೆದ 3 ದಿನಗಳಿಂದ ಸಬ್ಬತ್ತಿ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಆರೋಪಿ ವಾಸಿಸುತ್ತಿದ್ದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಖಾಸಗಿ ಹೋಟೆಲೊಂದರಲ್ಲಿ ಲೋಕೇಶ ನಾಯ್ಕನನ್ನು ಮುರ್ಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This
300x250 AD
300x250 AD
300x250 AD
Back to top