Slide
Slide
Slide
previous arrow
next arrow

ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಕಾಶ್ಮೀರದ ಶಾರದ ಪೀಠದಲ್ಲಿ ನವರಾತ್ರಿ ಆಚರಣೆ

300x250 AD

ಶ್ರೀನಗರ: ಭಾರತ ಸ್ವತಂತ್ರವಾದ ನಂತರ ಮೊದಲ ಬಾರಿಗೆ ಕಾಶ್ಮೀರದ ಟೀತ್ವಾಲ್‌ನಲ್ಲಿರುವ ಎಲ್‌ಒಸಿಗೆ ಅಡ್ಡಲಾಗಿರುವ ಪ್ರಾಚೀನ ಶಾರದಾ ಪೀಠದಲ್ಲಿ ನವರಾತ್ರಿಯನ್ನು ಆಚರಿಸಲಾಯಿತು. ಈ ಘಟನೆ ಇತಿಹಾಸ ಬರೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನವನ್ನೂ ಸೆಳೆದಿದೆ.

ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಕೇಂದ್ರ ಗೃಹ ಸಚಿವರು, “1947 ರಿಂದ ಮೊದಲ ಬಾರಿಗೆ ಈ ವರ್ಷ ಕಾಶ್ಮೀರದ ಐತಿಹಾಸಿಕ ಶಾರದಾ ದೇವಾಲಯದಲ್ಲಿ ನವರಾತ್ರಿ ಪೂಜೆಗಳು ನಡೆಯುತ್ತಿರುವುದು ಆಧ್ಯಾತ್ಮಿಕ ಮಹತ್ವದ ವಿಷಯವಾಗಿದೆ. ಈ ವರ್ಷ ಚೈತ್ರ ನವರಾತ್ರಿ ಪೂಜೆಯನ್ನು ಆಚರಿಸಲಾಯಿತು ಮತ್ತು ಈಗ ಶಾರದ ನವರಾತ್ರಿ ಪೂಜೆಯ ಮಂತ್ರಗಳು ದೇಗುಲದಲ್ಲಿ ಪ್ರತಿಧ್ವನಿಸುತ್ತಿವೆ. ಜೀರ್ಣೋದ್ಧಾರದ ನಂತರ 23ನೇ ಮಾರ್ಚ್ 2023 ರಂದು ದೇವಸ್ಥಾನವನ್ನು ಪುನಃ ತೆರೆಯುವ ಅದೃಷ್ಟ ನನಗೆ ಸಿಕ್ಕಿತು” ಎಂದಿದ್ದಾರೆ.

ಇದು ಕಣಿವೆಯಲ್ಲಿ ಶಾಂತಿಯ ಮರಳುವಿಕೆಯನ್ನು ಸೂಚಿಸುತ್ತದೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ  ಪುನರುಜ್ಜೀವನವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.ಈ ದೇವಾಲಯವನ್ನು 18 ಮಹಾ ಶಕ್ತಿ ಪೀಠಗಳಲ್ಲಿ ಅತ್ಯಂತ ಹಳೆಯದು ಎಂದು ಪರಿಗಣಿಸಲಾಗಿದೆ. ಸತಿಯ ಬಲಗೈ ಬಿದ್ದ ಸ್ಥಳದಲ್ಲಿಯೇ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಶಾರದಾ ಪೀಠವು ಹಿಂದೂ ಮತ್ತು ಬೌದ್ಧ ದೇವಾಲಯದ ವಿಶ್ವವಿದ್ಯಾನಿಲಯವಾಗಿ ಮಹತ್ವದ್ದಾಗಿತ್ತು. ಇದು ಟಿಬೆಟ್, ಚೀನಾ, ಥೈಲ್ಯಾಂಡ್, ನೇಪಾಳ, ಭೂತಾನ್, ಇಂಡೋನೇಷಿಯಾ, ಮ್ಯಾನ್ಮಾರ್, ಇರಾನ್, ಅಫ್ಘಾನಿಸ್ತಾನ ಮತ್ತು ಕಾಂಬೋಡಿಯಾ ಸೇರಿದಂತೆ ಹಲವು ದೇಶಗಳ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿತ್ತು.

300x250 AD

https://x.com/diprjk/status/1713470988330181032?s=20

Share This
300x250 AD
300x250 AD
300x250 AD
Back to top