Slide
Slide
Slide
previous arrow
next arrow

ಹಾಡಗೇರಿಯ ಜಗದೀಶ್ ಮರಾಠಿ ಅಗ್ನಿವೀರ್’ಗೆ ಆಯ್ಕೆ

300x250 AD

ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ ಗ್ರಾಮದ ಹಾಡಗೇರಿಯ ಯುವಕನೊರ್ವ ಭಾರತೀಯ ಸೈನ್ಯದ ‘ಅಗ್ನಿವೀರ್’ ಮೂಲಕ ದೇಶ ಸೇವೆಗೆ ಆಯ್ಕೆಯಾಗಿದ್ದಾರೆ. ಮೂಲಭೂತ ಸೌಕರ್ಯಗಳಿಂದ ಮರಿಚಿಕೆಯಾಗಿರುವ ತಾಲೂಕಿನ ಅತ್ಯಂತ ಕುಗ್ರಾಮವಾದ ಹಾಡಗೇರಿಯ ನಿವಾಸಿ ಜಗದೀಶ್ ಮರಾಠಿ ಆಯ್ಕೆಯಾದ ಯುವಕನಾಗಿದ್ದು, ರಾಮಚಂದ್ರ ಮರಾಠಿ, ಜ್ಯೋತಿ ಮರಾಠಿ ದಂಪತಿಯ ಕಿರಿಯ ಪುತ್ರನಾಗಿದ್ದಾನೆ.

ಹಾಡಗೇರಿಯಿಂದ ಸರ್ಕಾರಿ ಸೇವೆಯಲ್ಲಿ, ಅದರಲ್ಲಿಯು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಕಾಶ ಸಿಕ್ಕಿರುವುದರಲ್ಲಿ ಜಗದೀಶ್ ಪ್ರಥಮ ವ್ಯಕ್ತಿಯಾಗಿದ್ದಾರೆ. ಟಿವಿಯಲ್ಲಿ ಬಂದ ಮಾಹಿತಿ ಆಧರಿಸಿ, ಈ ಯೋಜನೆ ಬಗ್ಗೆ ತಿಳಿದುಕೊಂಡು ಮಾನದಂಡಗಳ ಪ್ರಕಾರ ಅಗತ್ಯ ದಾಖಲೆ ಸಲ್ಲಿಸಿ ಯೋಜನೆಗೆ ಅರ್ಜಿ ಸಲ್ಲಿಸಿ ಅಗ್ನಿವೀರ್’ ಯೋಜನೆಗೆ ಬೆಳಗಾವಿಯಲ್ಲಿ ತರಬೇತಿಯಲ್ಲಿ ಪಾಲ್ಗೊಂಡನು. ನೇಮಕಾತಿಯಲ್ಲಿ ಭಾಗವಹಿಸಿ ವೈದ್ಯಕೀಯ, ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಜಗದೀಶ್ ಆಯ್ಕೆಯಾಗಿದ್ದಾರೆ.

300x250 AD

ಅಕ್ಟೋಬರ್ 28ರಂದು ಗೋವಾದ ಪಣಜಿ 2 ಎಸ್ ಟಿ ಸಿಯಲ್ಲಿ ನೇಮಕಗೊಳ್ಳಲಿದ್ದಾರೆ. ಇನ್ನು, ಈ ಅಗ್ನಿವೀರ್ ಯೋಜನೆ ದೇಶದ ಯುವಕರಿಗೆ ಸೇನೆ ಸೇರುವ ಅವಕಾಶದ ಜೊತೆಗೆ ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ‘ಅಗ್ನಿವೀರ್’ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ದೇಶ ಸೇವೆಯಲ್ಲಿ ಯುವಕ ಭಾಗವಹಿಸಿ ರಾಜ್ಯದ ಕೀರ್ತಿ ಹೆಚ್ಚಿಸಿ ಯುವಕರಿಗೆ ಪ್ರೇರಣೆಯಾಗಲಿ.

Share This
300x250 AD
300x250 AD
300x250 AD
Back to top