Slide
Slide
Slide
previous arrow
next arrow

ವುಶು ಚಾಂಪಿಯನ್ ಶಿಪ್:ಹೊನ್ನಾವರದ ಅನ್ವಿತಾಗೆ ಬೆಳ್ಳಿ

300x250 AD

ಹೊನ್ನಾವರ: ವಶು ಚಾಂಪಿಯನ್ ಶಿಪ್ ನಲ್ಲಿ ಅನ್ವಿತಾ ನಾಯ್ಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ.

ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರಿ ಅನ್ವಿತಾ ಇವರು ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ವಶು ಲೀನ್ ಸಬ್ ಜೂನಿಯರ್ ಶಾನ್ಸು(ಪೈಟ್) ಕ್ರೀಡೆಯ 42 ಕೆ.ಜಿ. ಒಳಗಿನ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಕೀರ್ತಿ ತಂದಿದ್ದಾಳೆ.

300x250 AD

ವಶು ಅಶೋಸಿಯೇಶನ್ ಜನರಲ್ ಸೆಕ್ರಟರಿ ರಾಘವೆಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಇವಳ ಸಾಧನೆಗೆ ಸಚೀವ ಮಂಕಾಳ ವೈದ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ತರಬೇತಿದಾರ ರಾಘವೇಂದ್ರ ಹೊನ್ನಾವರ, ಮಾರ್ಥೊಮಾ ಸಂಸ್ಥೆಯವರು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top