Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ ವಿರೋಧ: ಜಿಲ್ಲಾದ್ಯಂತ ಮೂರು ಹಂತದಲ್ಲಿ ಹೋರಾಟ: ರವೀಂದ್ರ ನಾಯ್ಕ

300x250 AD

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜ್ಯಾರಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಜೀವನಕ್ಕೆ ಮಾರಕವಾಗಿರುವುದರಿಂದ ಕರಡು ಪ್ರತಿಯನ್ನ ವಿರೋಧಿಸಿ ಮೂರು ಹಂತದಲ್ಲಿ ಹೋರಾಟವನ್ನ ಹಮ್ಮಿಕೊಳ್ಳುವುದರೊಂದಿಗೆ ವರದಿಯನ್ನ ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರಕಾರಕ್ಕೆ ಅಗ್ರಹಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀರ್ಮಾನಿಸಿದೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನ ವಿರೋಧಿಸಿ ಅತೀ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡುವ 147 ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ವರದಿಯನ್ನ ತೀರಸ್ಕರಿಸಬೇಕೆಂದು ಆಗ್ರಹಿಸಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಸಭೆಗಳಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಜಾಥದ ಪ್ರಥಮ ಹಂತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಾಥದ ಎರಡನೇ ಹಂತದಲ್ಲಿ ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೊಷಿಸಲ್ಪಟ್ಟ ಪ್ರದೇಶದಲ್ಲಿ ಜಾಗೃತ, ತಿಳುವಳಿಕೆ ಮತ್ತು ಕುಟುಂಬಗಳಿ0ದ ವರದಿಯನ್ನ ತೀರಸ್ಕರಿಸಲು ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಪತ್ರ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.

300x250 AD

ಜಾಥದ ಮೂರನೇ ಹಂತವಾಗಿ ಈಗಾಗಲೇ ಅರಣ್ಯ ಭೂಮಿಯನ್ನ ರಕ್ಷಿಸಿ, ಸಂರಕ್ಷಿಸಿ ಪೋಷಣೆ ಮಾಡಲು ಸಾಕಷ್ಟು ಕಾನೂನುಗಳಿರುವುದರಿಂದ ಅವೈಜ್ಞಾನಿಕ ವರದಿಯನ್ನ ಜ್ಯಾರಿಗೆ ವಿರೋಧಿಸಿ ಸಂಬ0ಧಪಟ್ಟ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ದಾಖಲಿಸಲಾಗುವುದು ಎಂದು ಅವರು ಪ್ರಸ್ತಾಪಿಸಿದರು.

Share This
300x250 AD
300x250 AD
300x250 AD
Back to top