ಕಾರವಾರ: ಜಿಲ್ಲೆಯಲ್ಲಿ ಓಸಿ ಹಾಗೂ ಮಟ್ಕಾ ದಂದೆ ಹೆಚ್ಚಾಗುತ್ತಿದೆ. ದಂದೆಗೆ ಕಡಿವಾಣ ಹಾಕಬೇಕಾದವರೇ ಮೌನವಾಗಿರುವ ಹಿನ್ನಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿ0ದ ಹೆಚ್ಚಾಗಿದೆ. ದಂದೆಗೆ ಕಡಿವಾಣ ಹಾಕಲು ಗಡಿಪಾರಿನಂತಹ ಕಠಿಣ ಕ್ರಮ ಕೈಗೊಂಡರೇ ಮಾತ್ರ ಸಾಧ್ಯ ಎನ್ನುವ ಆಗ್ರಹವನ್ನ ಸಾರ್ವಜನಿಕರು ಮಾಡಲು ಪ್ರಾರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಓಸಿ ಮಟ್ಕಾ ದಂಧೆ ಹೆಚ್ಚಾಗಿರುವ ಕುರಿತು ಪತ್ರಿಕೆಯಲ್ಲಿ ಬಂದ ಸುದ್ದಿಯ ಕುರಿತು ಹಲವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ದಂದೆಗೆ ಕಡಿವಾಣ ಹಾಕಲು ಕಠಿಣ ಕಾನೂನು ಇಲ್ಲದಿರುವುದೇ ಬುಕ್ಕಿಗಳಿಗೆ ಲಾಭವಾಗಿದ್ದು ಇಂದು ಪ್ರಕರಣ ದಾಖಲಾದರೆ ನಾಳೆ ಮತ್ತೆ ದಂದೆಯನ್ನ ಮುಂದುವರೆಸುವ ಸ್ಥಿತಿ ಎದುರಾಗಿದೆ ಎಂದಿದ್ದಾರೆ. ಓಸಿ ಮಟ್ಕಾ ದಂದೆಯಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ ದಾಖಲು ಮಾಡಿದರೆ ಠಾಣೆಯಲ್ಲಿಯೇ ಬೇಲ್ ಪಡೆಯುವಷ್ಟು ಸುಲಭ ಪ್ರಕ್ರಿಯೆ ಇರುವ ಹಿನ್ನಲೆಯಲ್ಲಿ ದಂದೆಯನ್ನ ನಡೆಸುವವರಿಗೆ ಭಯವಿಲ್ಲದಂತಾಗಿದೆ. ಇನ್ನು ದಂದೆಗೆ ಕಡಿವಾಣ ಹಾಕಬೇಕಾಗಿರುವ ಪೊಲೀಸರು ಮೇಲಾಧಿಕಾರಿಗಳ ಆದೇಶ ಬಂದರೆ ಮಾತ್ರ ಕ್ರಮ ಕೈಗೊಳ್ಳುತ್ತಾರೆ. ಇಲ್ಲದಿದ್ದರೇ ಮೌನಕ್ಕೆ ಶರಣಾಗುತ್ತಾರೆ.
ಓಸಿ ಮಟ್ಕಾ ದಂದೆಯಲ್ಲಿ ಪಾಲ್ಗೊಂಡ ಹಲವರು ಪ್ರಕರಣ ದಾಖಲಾದರೆ ನಂತರ ದಂದೆಯನ್ನ ನಿಲ್ಲಿಸಿ ಬೇರೆ ದಂದೆಯಲ್ಲಿ ಪಾಲ್ಗೊಂಡರ ಸಂಖ್ಯೆ ವಿರಳ. ಎಷ್ಟೇ ಪ್ರಕರಣ ದಾಖಲಾದರು ಮಾರನೇ ದಿನವೇ ದಂದೆಯನ್ನ ರಾಜಾರೋಷವಾಗಿ ನಡೆಸುವಷ್ಟು ಕಾನೂನಿನ ಮೇಲೆ ದಂದೆಕೋರರಿಗೆ ಭಯ ಇಲ್ಲದಂತಾಗಿದೆ. ಸದ್ಯ ಪೊಲೀಸರು ಗ್ರಾಮೀಣ ಭಾಗದ ಪ್ರತಿ ಗ್ರಾಮ ಮಟ್ಟದಲ್ಲೂ ಕಣ್ಣನ್ನ ಇಟ್ಟು ಯಾರು ಓಸಿ ಮಟ್ಕಾ ಹೆಸರಿನಲ್ಲಿ ಜನರಿಂದ ಹಣವನ್ನ ಸಂಗ್ರಹಿಸುತ್ತಿದ್ದಾನೋ ಅಂತವನ ಮೇಲೆ ಕ್ರಮ ಕೈಗೊಂಡು ಗಡಿಪಾರಿನಂತಹ ಶಿಕ್ಷ ಕೊಟ್ಟರೇ ಮಾತ್ರ ದಂದೆಗೆ ಸ್ವಲ್ಪವಾದರು ಕಡಿವಾಣ ಹಾಕಬಹುದು ಎನ್ನುವುದು ಸಾರ್ವಜನಿಕರ ಆಗ್ರಹ.