Slide
Slide
Slide
previous arrow
next arrow

ಅಬಕಾರಿ, ಪೊಲೀಸರ ಜಾಣಮೌನ ; ಅನಧಿಕೃತ ಮದ್ಯ ಮಾರಾಟ ದಂಧೆ ಅವ್ಯಾಹತ

300x250 AD

ಶಿರಸಿ: ತಾಲೂಕಿನ ಬಿಸಕೊಪ್ಪದಲ್ಲಿ ಕಿರಾಣಿ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ಅನಧಿಕೃತ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ದಂಧೆಯಲ್ಲಿ ನಿರತರಾಗಿದ್ದಾರೆ.

ಬಿಸಲಕೊಪ್ಪ ಗ್ರಾ.ಪಂ ಸುತ್ತಮುತ್ತ ಅಕ್ರಮ ಸಾರಾಯಿ ಮಾರಾಟದ ಅಂಗಡಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ಆ ಭಾಗದ ಮಹಿಳೆಯರು ತಹಸೀಲ್ದಾರ್ ಹಾಗೂ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಒಂದು ವಾರದವರೆಗೆ ಮಾರಾಟ ಸ್ಥಗಿತಗೊಳಿಸಿದ್ದ ಅಂಗಡಿಕಾರರು, ಇದೀಗ ಬಿಸಲಕೊಪ್ಪದಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆ ಯಾರ ಭಯವಿಲ್ಲದೇ ನಡೆಯುತ್ತಿದೆ.

ಬಿಸಲಕೊಪ್ಪದ ಕೆಲವು ಕಿರಾಣಿ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋ ಸಾಕ್ಷಿ ಸಹಿತವಾಗಿ ಮಹಿಳೆಯರು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದರು. ಆ ಭಾಗದಲ್ಲಿ ಸುಮಾರು 10ಕ್ಕಿಂತ ಹೆಚ್ಚು ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಕಳೆದ 10 ವರ್ಷಗಳಿಂದ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಹೈಸ್ಕೂಲ್ ಕಾಲೇಜ್‌ಗೆ ಹೋಗುವಂತ ಮಕ್ಕಳು ಮದ್ಯ ವ್ಯಸನಿಗಳಾಗಿದ್ದಾರೆ. ವಯಸ್ಕರು ಕೆಲಸ ಕಾರ್ಯ ಬಿಟ್ಟು ದಿನಪೂರ್ತಿ ಮದ್ಯ ಮಾರಾಟ ಅಂಗಡಿಗಳಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಅಂಗಡಿ ಮಾಲಿಕರನ್ನು ಕೇಳಿದರೆ ತಾವು ಸಂಬ0ಧ ಪಟ್ಟ ಕೆಲವು ಅಧಿಕಾರಿಗಳಿಗೆ 30- 40 ಸಾವಿರ ರೂ. ಹಫ್ತಾ ನೀಡಿ, ದಂಧೆ ನಡೆಸುತ್ತಿದ್ದೇವೆ. ಅಕ್ರಮ ಸಾರಾಯಿ ಮಾರಾಟದ ಕುರಿತು ಪ್ರಶ್ನಿಸಿದರೆ ಉದ್ಧಟತನದ ಮಾತನಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

300x250 AD

ಬಿಸ್ಲಕೊಪ್ಪದಲ್ಲಿ ಅಕ್ರಮ ಸಾರಾಯಿ ದಂಧೆ ನಡೆಯುತ್ತಿರುವ ಬಗ್ಗೆ ಗ್ರಾಪಂಗೆ ಮಾಹಿತಿ ಇದ್ದರೂ ಮೌನ ವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಮದ್ಯ ಮಾರಾಟ ಸ್ಥಗಿತಗೊಳಿಸದಿದ್ದರೆ ಮಹಿಳೆಯರೆಲ್ಲರೂ ಸೇರಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಕೈಗೊಂಡಿದ್ದಾರೆ. ಬಿಸಲಕೊಪ್ಪದಲ್ಲಿ ಅಕ್ರಮ ಸಾರಾಯಿ ದಂದೆ ನಡೆಯುತ್ತಿರುವ ಬಗ್ಗೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸ್ಪಷ್ಟ ಮಾಹಿತಿ ಇದೆ. ಇದರ ವಿರುದ್ಧ ದೂರು ನೀಡಿದರೆ ನಮಗೆ ದಿನನಿತ್ಯ ತೊಂದರೆ ನೀಡುತ್ತಾರೆ. ರಾಜ್ಯ ಸರ್ಕಾರ ಉಚಿತ ಭಾಗ್ಯಗಳ ಜತೆ ಅಕ್ರಮ ಸಾರಾಯಿ ಮಾರಾಟ ಭಾಗ್ಯ ನೀಡಿರುವುದು ಬಹಳ ಬೇಸರದ ಸಂಗತಿ. ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಕಾರ್ಮಿಲಾ ಫರ್ನಾಂಡೀಸ್ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top