ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಹಂತದ ಕಂತು ಹಾಗೂ ಕೆಲವರಿಗೆ ಮೊದಲ ಕಂತು ಬಿಡುಗಡೆ ಭಾಗ್ಯ ಯಾವಾಗ…? ಎಂಬ ಪ್ರಶ್ನೆ ಮಹಿಳೆಯರಲ್ಲಿ ಮೂಡಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗೇಶ್ ಕುರ್ಡೇಕರ್ ಹೇಳಿದ್ದಾರೆ.
ಮೊದಲನೆಯ ಕಂತನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಎರಡನೆಯ ಕಂತು ಬರುವ ಬಗ್ಗೆ ಮಹಿಳೆಯರು ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿ ರಾಜ್ಯದ ಪ್ರತಿ ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ನೆರವು ನೀಡಲಾಗುತ್ತಿದೆ. ಹಲವಾರು ಫಲಾನುಭವಿಗಳ ಖಾತೆಗೆ ಕೆವೈಸಿ ಹಾಗೂ ಎನ್‌ಪಿಸಿಐ ಆಗದ ಕಾರಣ ಈ ಯೋಜನೆಯ ಲಾಭ ಸಿಕ್ಕಿಲ್ಲ. ಸರ್ಕಾರದಿಂದ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲರ ಖಾತೆಗೂ ಹಣ ಜಮೆ ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ಆ ಹಣ ಇನ್ನೂ ಬಾರದ ಕಾರಣಎರಡನೆಯ ಕಂತಿನ ಹಣ ಬರುವ ಸಾಧ್ಯತೆ ಇದೆಯೇ ಎಂದು ಮಹಿಳೆಯರಿಗೆ ಪ್ರಶ್ನೆ ಕಾಡುತ್ತಿದೆ ಎಂದಿದ್ದಾರೆ.
ಇದರಿ0ದಾಗಿ ಮಹಿಳೆಯರು ತಾವು ಖಾತೆ ಹೊಂದಿರುವ ಬ್ಯಾಂಕ್ ಮತ್ತು ಆನ್‌ಲೈನ್ ಸೆಂಟರ್‌ಗೆ ನಿತ್ಯ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ನುಡಿದಂತೆ ನಡೆಯುವ ರಾಜ್ಯ ಸರ್ಕಾರ ಕೊಟ್ಟ 5 ಗ್ಯಾರಂಟಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾಯಿಸಬೇಕೆಂದು ನಾಗರಿಕರ ಹಿತದೃಷ್ಟಿಯಿಂದ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.