Slide
Slide
Slide
previous arrow
next arrow

ನಾಗಯಲ್ಲಮ್ಮ ದೇವಿ ನವರಾತ್ರಿ ಮಹೋತ್ಸವಕ್ಕೆ ನಾಳೆ ಚಾಲನೆ

300x250 AD

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಮದ ಶ್ರೀನಾಗ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.

ಪಲ್ಲಕ್ಕಿ ಮೆರವಣಿಗೆ ಹಾಗೂ ಅ.21ರ ಮಧ್ಯಾಹ್ನ 2 ಗಂಟೆಯಿಂದ ದೇವಸ್ಥಾನದಲ್ಲಿ ಮುತ್ತೈದೆಯರಿಂದ ಅರಿಶಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ. ಅ.23ರ ರಾತ್ರಿ 7.30ಕ್ಕೆ ಆಯುಧ ಹಾಗೂ ವಾಹನಗಳ ಪೂಜೆ ನಡೆಯಲಿದೆ. ಅ.24ರ ಬೆಳಿಗ್ಗೆ ನಿತ್ಯ ಪೂಜೆ ಹಾಗೂ ದೇವಿಗೆ ವಿವಿಧ ಸೇವೆಗಳು ಮತ್ತು ಹರಕೆಯ ತುಲಾಭಾರ ಸೇವೆಗಳು ಫಲಾವಳಿಗಳ ಲಿಲಾವು, ತದನಂತರ ಸರಿಯಾಗಿ 2 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಹಾಗೂ ಉತ್ಸವ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top