ಮುಂಡಗೋಡ: ತಾಲೂಕಿನ ಚವಡಳ್ಳಿ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಗೆ ಗ್ರಾಮ ಪಂಚಾಯತ ಸದಸ್ಯರು ಬಾರದೆ ಇರುವುದರಿಂದ ಗ್ರಾಮಸ್ಥರು ಸಭೆಗೆ ಬಹಿಷ್ಕಾರ ಹಾಕಿದ್ದಾರೆ.
ಚವಡಳ್ಳಿ ಗ್ರಾಮ ಪಂಚಾಯತ ಒಟ್ಟು 13 ಸದಸ್ಯರನ್ನು ಹೊಂದಿದ್ದು, ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಗೆ 3 ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಇನ್ನು 10 ಸದಸ್ಯರು ಸಭೆಯಲ್ಲಿ ಗೈರಾಗಿದ್ದ ಕಾರಣ ಗ್ರಾಮ ಸಭೆ ಮುಂದೂಡಿದ್ದಾರೆ. ಸಭೆಗೆ ಗ್ರಾಮ ಪಂಚಾಯತ್ ಸದಸ್ಯರು ಬಾರದೆ ಇರುವ ಕಾರಣಕ್ಕೆ ಗ್ರಾಮ ಸಭೆ ಮುಂದೂಡಬೇಕು ಎಂದು ಗ್ರಾಮಸ್ಥ ವಿದ್ಯಾಧರ ಮಾದಾಪೂರ ಅವರು ಗ್ರಾಂ.ಪ0 ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.
ಗ್ರಾಂ. ಪಂ ಅಧ್ಯಕ್ಷ ಸಭೆಯಲ್ಲಿ ತಡವಾಗಿ ಬಂದ ಕಾರಣಕ್ಕೆ ಉಪಾಧ್ಯಕ್ಷರಿಂದ ಗ್ರಾಮ ಸಭೆ ಉದ್ಘಾಟಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಇನ್ನು ಕೆಲ ಇಲಾಖೆ ಅಧಿಕಾರಿಗಳು ಭಾಗವಹಿಸಿಲ್ಲ. ಮುಂದೂಡಿದ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು. ಭಾಗವಹಿಸದೆ ಇದ್ದರೆ ಇನ್ನೂ ಸಭೆ ಮುಂದೂಡಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಗೊಪಾಲ ಪಾಟೀಲ್, ಗೊಪಾಲ್ ಕೊಪ್ಪದ ಪ್ರಮುಖರು ಇದ್ದರು.