Slide
Slide
Slide
previous arrow
next arrow

ವೈದ್ಯ ಹನುಮಂತ ಗೌಡಗೆ ‘ನ್ಯಾಷನಲ್ ಐಕಾನ್ ಅವಾರ್ಡ್’

300x250 AD

ಅಂಕೋಲಾ: ನಾಟಿ ವೈದ್ಯ ಬೆಳಂಬಾರದ ಹನುಮಂತ ಬೊಮ್ಮು ಗೌಡ ಇವರು ವಿಶ್ವದರ್ಶನ ದಿನಪತ್ರಿಕೆಯವರು ನೀಡುವ ಪ್ರಸ್ತುತ ಸಾಲಿನ ‘ನ್ಯಾಷನಲ್ ಐಕಾನ್ ಅವಾರ್ಡ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅ.29ರಂದು ಬೆಳಿಗ್ಗೆ 10.30ಕ್ಕೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಜ್ಯೋತಿ ಗಲ್ಲಿಯ ದೇವಪ್ಪ ಹೊಸಮನಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಿದ್ದಾರೆ.

300x250 AD

ಹನುಮಂತ ಬೊಮ್ಮು ಗೌಡ ಅವರು ತಮ್ಮ ಮನೆತನದ ನಾಟಿ ಔಷಧಿಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇವರು ನಾಲ್ಕನೇ ತಲೆಮಾರಿನವರಾಗಿದ್ದಾರೆ. ಜತೆಗೆ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹಲವು ದಶಕಗಳಿಂದ ಹೋರಾಡುತ್ತಲೇ ಬಂದಿದ್ದಾರೆ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Share This
300x250 AD
300x250 AD
300x250 AD
Back to top