Slide
Slide
Slide
previous arrow
next arrow

ಸಂಭ್ರಮದ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ದಿನಗಣನೆ

300x250 AD

ದಾಂಡೇಲಿ: ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ಎರಡನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ನಗರದಲ್ಲಿ ದಿನಗಣನೆ ಆರಂಭವಾಗಿದೆ.

ನಗರದ ಹಳೆ ನಗರಸಭೆಯ ಮೈದಾನದಲ್ಲಿ ಅ.15ರಿಂದ ಅ.23ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರ ಗೌರವಾಧ್ಯಕ್ಷತೆ ಮತ್ತು ಟಿ.ಎಸ್.ಬಾಲಮನಿಯವರ ಅಧ್ಯಕ್ಷತೆಯ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯು ಈ ಬಾರಿ ನವರಾತ್ರಿ ಉತ್ಸವವನ್ನು ಸಂಭ್ರಮ ಸಡಗರ ಹಾಗೂ ವೈವಿಧ್ಯಮಯವಾಗಿ ಆಯೋಜಿಸಲು ಅಣಿಯಾಗಿದೆ.

300x250 AD

ಈಗಾಗಲೇ ದೇವಿಯ ಮಂಟಪವನ್ನು ಹೊನ್ನಾವರದ ಕಲಾವಿದ ದಾಮೋದರ ನಾಯ್ಕ ನೇತೃತ್ವದಲ್ಲಿ ಹಾಗೂ ಪೆಂಡಾಲ್ ನಿರ್ಮಾಣ ಕಾರ್ಯವನ್ನು ಜ್ವಾಲಿ ಜೀವನ್ ಸಂಸ್ಥೆಯ ಪೀಟರ್ ಪೌಲ್ ಅವರ ನೇತೃತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇಡೀ ದಾಂಡೇಲಿಗೆ ದಾಂಡೇಲಿಯೇ ಸಂಭ್ರಮಿಸುವ ನವರಾತ್ರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ.

Share This
300x250 AD
300x250 AD
300x250 AD
Back to top