Slide
Slide
Slide
previous arrow
next arrow

ಹಳಿಯಾಳದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ

300x250 AD

ಹಳಿಯಾಳ: ಇಲ್ಲಿನ ತಾಲೂಕ ಆಡಳಿತದ ಸಭಾಭವನದಲ್ಲಿ ಪೊಲೀಸ್ ಇಲಾಖೆ ಆಶ್ರಯದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಪಿಎಸ್‌ಐ ವಿನೋದ್ ರೆಡ್ಡಿ ಅವರು ಇಂದಿನ ತಾಂತ್ರಿಕ ಬದಲಾವಣೆಯ ಯುಗದಲ್ಲಿ ಕಂಡುಬರುವ ಸೈಬರ್ ಅಪರಾಧ ಸಮಸ್ಯೆಗಳ ಜ್ವಲಂತ ಉದಾಹರಣೆಗಳ ಮೂಲಕ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಮೊಬೈಲ್ ಬಂದ ಮೇಲೆ ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನಕ್ಕೆ ಒಂದಲ್ಲಾ ಒಂದು ಕಡೆ ಆನಲೈನ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿವೆ. ಅದೆಷ್ಟೋ ಜನ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ವಿದೇಶದಲ್ಲಿ ಉದ್ಯೋಗ ಕೊಡಿಸಲಾಗುವುದು, ಪಾರ್ಟ್ಟೈಮ್ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಹಲವಾರು ಆಸೆ, ಆಮಿಷವೊಡ್ಡಿ ಸತ್ಯದ ಮೇಲೆ ಹೊಡೆದ ರೀತಿಯಲ್ಲಿ ಸುಳ್ಳು ಹೇಳಿ ಆನ್‌ಲೈನ್ ಮೂಲಕ ವಂಚಿಸುವ ಪ್ರಕರಣ ಅವಳಿನಗರದಲ್ಲಿ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ.

ವಾಟ್ಸಪ್‌ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ಕಳೆದ ಕೆಲವು ವಷÀðಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಮುಖ್ಯವಾಗಿ ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಟಾ ಮಾಲೀಕತ್ವದ ವಾಟ್ಸ್ಆಪ್ ಸ್ಕ್ಯಾಮ್ ಮೆಸೇಜ್‌ಗಳ ತಾಣವಾಗಿ ಬಿಟ್ಟಿದೆ. ದಿನಕ್ಕೊಂದರಂತೆ ವಂಚನೆ ಮೆಸೇಜ್‌ಗಳು ವಾಟ್ಸ್ಆಪ್‌ನಲ್ಲಿ ಹರಿದಾಡುತ್ತಿರುತ್ತದೆ. ಇದರ ಮೂಲಕ ಅವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ. ಇದೀಗ ಇದಕ್ಕೆ ಉದಾಹರಣೆ ಎಂಬAತೆ ಆನ್‌ಲೈನ್ ವಂಚನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ವಾಟ್ಸ್ಆಪ್‌ನಲ್ಲಿ ತಮ್ಮ ವಿದ್ಯುತ್ ಬಿಲ್ಗಳನ್ನು ಪಾವತಿಸಲು ನೆನಪಿಸುವ ಸಂದೇಶಗಳು ಹರಿದಾಡುತ್ತಿದೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದುವರೆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ ಎಂದರು.

ಎಟಿಎಂ ಕಾರ್ಡ್ ವಂಚನೆ, ಓಎಲ್‌ಎಕ್ಸ್, ಕ್ವಿಕರ್ ಮೂಲಕ ವಂಚನೆ, ಸಾಲ ಕೊಡುವ ನೆಪದಲ್ಲಿ ವಂಚನೆ, ವಿವಾಹದ ಹಲವಾರು ವೆಬ್ಸೈಟ್‌ಗಳಿಂದ ವಂಚನೆ, ಸಾಮಾಜಿಕ ಜಾಲತಾಣದಿಂದ, ಅಪರಿಚಿತ ವ್ಯಕ್ತಿ ವಾಟ್ಸ್ಆಪ್ ವಿಡಿಯೋ ಕಾಲ ಮಾಡಿ ಬೆದರಿಕೆ ಹಾಕುವುದು, ಕಸ್ಟಮರ್ ಕೇರ್ ಸೋಗಿನಲ್ಲಿ ಮಾತನಾಡಿ, ಕ್ಯೂಆರ್ ಕೋಡ್ ಮೂಲಕ ಹಣ ವಂಚಿಸುತ್ತಿದ್ದಾರೆ ಎಂದು ತಿಳಿಹೇಳಿದರು.

300x250 AD

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top