Slide
Slide
Slide
previous arrow
next arrow

ಡಾ.ಟಿ.ಎಸ್.ಅಶೋಕಕುಮಾರಗೆ ಸನ್ಮಾನ

300x250 AD

ಸಿದ್ದಾಪುರ: ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಪಿಸಿಸಿಎಫ್ (ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯದರ್ಶಿ) ಕನ್ನಡಿಗರಾದ ಸಾಗರದ ಬನದಕೊಪ್ಪದ ಡಾ.ಟಿ.ಎಸ್.ಅಶೋಕಕುಮಾರ ಐಎಫ್‌ಎಸ್ ಅವರನ್ನು ಸಾಹಿತಿಗಳಾದ ಜಿ.ಜಿ.ಹೆಗಡೆ ಬಾಳಗೋಡ ಹಾಗೂ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ಅಧಿಕಾರಿಯನ್ನು ಸನ್ಮಾನಿಸಿದರು.

ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ 83 ಪ್ರತಿಶತ ಅರಣ್ಯವನ್ನು ರಕ್ಷಿಸಿದ್ದು, ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಸುವ್ಯವಸ್ಥಿತವಾದಂತಹ ಸೌಲಭ್ಯಗಳನ್ನು ಸರಕಾರದಿಂದ ಕಲ್ಪಿಸಿದ್ದು, ಇಲಾಖೆಯ ಅತ್ಯುತ್ತಮವಾದ ಕೆಲಸ-ಕಾರ್ಯ ಮತ್ತು ಎಲ್ಲಾ ಬಂದರು ಮತ್ತು ರಸ್ತೆಗಳಲ್ಲಿಯೂ ಪ್ಲಾಸ್ಟಿಕ್ ಮುಕ್ತ ಸ್ಥಳವನ್ನಾಗಿ ಮಾಡಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಅಲ್ಲಿಯ ಜನರಲ್ಲಿ ಸಹಜವಾದ ಅರಿವನ್ನು ಮೂಡಿಸಿ ಪ್ರವಾಸೋದ್ಯಮದ ಮೂಲಕವೇ ವಿಶೇಷ ಆದಾಯ ಸ್ಥಳೀಯ ಆಡಳಿತ ಬೊಕ್ಕಸಕ್ಕೆ ಬರುವಂತೆ ಮಾಡುತ್ತಿರುವ ಕೆಲಸ ಮತ್ತು ಅರಣ್ಯ ಸಂರಕ್ಷಣೆಯ ಮಹತ್ವದ ಕಾರ್ಯವನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದ್ದು ಡಾ. ಅಶೋಕಕುಮಾರ ಅವರನ್ನು ಸನ್ಮಾನಿಸಿದ್ದು ಈ ಸಂದರ್ಭದಲ್ಲಿ ಅವರ ಪತ್ನಿ ಮಹಾಲಕ್ಷ್ಮಿ ಅವರು ಕೂಡಾ ಉಪಸ್ಥಿತರಿದ್ದರು.

300x250 AD

ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ವಿವಿಧ ಜಾತಿಯ ಸಸ್ಯ ಸಂಕುಲ ಮತ್ತು ಸಮುದ್ರಗಳಲ್ಲಿ 4000 ಕ್ಕಿಂತ ಹೆಚ್ಚಿನ ಮೀನುಗಳ ತಳಿ ಹಾಗೂ ಅಪಾರವಾದ ಸಾಗರ ಸಂಪತ್ತು ಅಡಗಿದ್ದು ಕೃಷಿ ಚಟುವಟಿಕೆಗಳಿಗೂ ಕೂಡಾ ಅಲ್ಲಲ್ಲಿ ಅವಕಾಶವಿರುತ್ತದೆ. ಅಡಿಕೆ, ತೆಂಗುಗಳನ್ನು ಕಾಡಿನಲ್ಲಿ ಬೆಳೆಯುತ್ತಿದ್ದುದು ಕಂಡು ಬಂತು. ಎಲ್ಲಾ ನಡುಗಡ್ಡೆಗಳು ಬಹುತೇಕವಾಗಿ ಜನ ಜೀವನದಿಂದ ಕೂಡಿದ್ದು ಅದನ್ನು ರಕ್ಷಿಸುವಲ್ಲಿ ವಿಶೇಷ ಕಾಳಜಿಯನ್ನು ತೋರಿಸಿದ್ದಕ್ಕೆ ಅವರನ್ನು ಅಭಿನಂದಿಸಲಾಯಿತು.

Share This
300x250 AD
300x250 AD
300x250 AD
Back to top