ಹಳಿಯಾಳ: ಕೆಎಲ್ಎಸ್ ವಿಡಿಐಟಿ ವಿದ್ಯಾರ್ಥಿಗಳು ಅಂತರಿಕ್ಷಯಾನ ಮತ್ತು ರಕ್ಷಣಾ ವಿಭಾಗದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ಮಂಗಲಾ ಪಾಟೀಲ್, ಸ್ವಾತಿ ಪಾಟೀಲ್, ರಕ್ಷಿತಾ ದೇವರೆಡ್ಡಿ, ಕೇಶವ ಪಿ., ಶುಭಂ ಉಪ್ಪಾರ್, ಬೆಂಗಳೂರಿನ ವಿತಾವಿ ಪ್ರಾದೇಶಿಕ ಕೇಂದ್ರದಲ್ಲಿರುವ ಕೆ- ಟೆಕ್ನ ಅಂತರಿಕ್ಷಯಾನ ಮತ್ತು ರಕ್ಷಣಾ ಶ್ರೇಷ್ಠತೆಯ ಕೇಂದ್ರದಲ್ಲಿ ಒಂದು ತಿಂಗಳ ಕಾಲ ತರಬೇತಿ ಪಡೆದುಕೊಂಡರು.
ವಿಜ್ಞಾನಿ ಹಾಗೂ ಕೆ-ಟೆಕ್ನ ಶ್ರೇಷ್ಠತೆಯ ಕೇಂದ್ರದಲ್ಲಿ ಚೇರ್ಮನ್ರಾಗಿ ಸೇವೆಸಲ್ಲಿಸಿದ್ದ ಸಿ.ಡಿ.ಬಾಲಾಜಿ, ಭಾರತೀಯ ವಿಮಾನಿಕ ಸಂಸ್ಥೆಯಲ್ಲಿ ಹಿರಿಯ ಎಂಜಿನಿಯರಾಗಿ ಸೇವೆ ಸಲ್ಲಿಸಿದ್ದ ರಮೇಶ್ಕುಮಾರ್ ಪಿ., ಡಾ.ಕೆ.ಬದ್ರಿನಾರಾಯಣ, ಎಚ್.ಆರ್.ಸುದರ್ಶನ್ ಪ್ರಸಾದ್ ತಮ್ಮ ಅತ್ಯಮೂಲ್ಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತ, ಅಂತರಿಕ್ಷಯಾನ ಮತ್ತು ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವಿಜ್ಞಾನಿ ಹಾಗೂ ಇಂಜಿನಿಯರ್ಸ್ಗಳಿಂದ ತರಬೇತಿ ಪಡೆದುಕೊಂಡಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ್ ಹರ್ಷ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಹಾಗೂ ಅಂತರಿಕ್ಷಯಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದು ಪ್ರಾಚಾರ್ಯ ಡಾ. ವಿ.ಎ.ಕುಲಕರ್ಣಿ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ದೀಕ್ಷಿತ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ನ ಸಂಚಾಲಕ ಪ್ರೊ.ರಜತ್ ಆಚಾರ್ಯ ಹಾಗೂ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.