Slide
Slide
Slide
previous arrow
next arrow

ನೀರನ್ನು ಮಿತವಾಗಿ ಬಳಸಲು ಶಾಸಕರ ಕರೆ

300x250 AD

ಸಿದ್ದಾಪುರ: ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಹೆಚ್ಚಾಗಿದ್ದು, ತಾಲೂಕಿನ ಪ್ರತಿ ಪಂಚಾಯ್ತಿ ವ್ಯಾಪ್ತಿಯ ಜನ ನೀರನ್ನು ಮಿತವಾಗಿ ಬಳಸುವಂತೆ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

ತಾಲೂಕಿನ ಬಿದ್ರಕಾನ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಸಲಿಗೆಯಲ್ಲಿ ನಿರ್ಮಿಸಲಾದ ನೂತನ ಬಸ್ ತಂಗುದಾಣ ಉದ್ಘಾಟಿಸಿ ಪಂಚಾಯ್ತಿ ಕಚೇರಿಗೆ ಆಗಮಿಸಿ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರಿನ ಮೂಲಗಳು ಸಹ ಭರ್ತಿಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ನಿಚ್ಚಳಲಾಗಿದ್ದು, ಜನ ನೀರನ್ನು ಮಿತವಾಗಿ ಬಳಸಬೇಕು ಎಂದರು.

ಚುನಾವಣೆಯಲ್ಲಿ ಹಗಲು- ರಾತ್ರಿ ಕೆಲಸ ಮಾಡಿ ಗೆಲ್ಲಿಸಿದ ಪಂಚಾಯ್ತಿ ವ್ಯಾಪ್ತಿಯ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಾದ್ಯಂತ ಜನ ವಿವಿಧ ಬೇಡಿಕೆ ಸಲ್ಲಿಸುತ್ತಿದ್ದಾರೆ. ಚುನಾಯಿತ ಸದಸ್ಯರು ತಮ್ಮ ವ್ಯಾಪ್ತಿಯನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಾರ್ವಜನಿಕರ ಒತ್ತಡ ಕಡಿಮೆಯಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಜನರು ಆಯ್ಕೆ ಮಾಡಿದರೆ ಜನಪ್ರತಿನಿಧಿಯಾದವನು ಸ್ವಾರ್ಥ ಸಾಧಿಸಿದರೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ. ಜನರ ಕೆಲಸವನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಮಾಡಲಾಗುವುದು ಎಂದರು.

300x250 AD

ಈ ವೇಳೆ ಬಿದ್ರಕಾನ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ಯಾಮಲಾ ಗೌಡ, ಉಪಾಧ್ಯಕ್ಷ ಬಾಬು ನಾಯ್ಕ, ಸದಸ್ಯರಾದ ಮಧು ಭಟ್ಟ, ಜಯಂತ ಹೆಗಡೆ, ಮಮತಾ ಚೆನ್ನಯ್ಯ, ಸರೋಜಾ ನಾಯ್ಕ, ಸಾವಿತ್ರಿ ಗೌಡ ಉಪಸ್ಥಿತರಿದ್ದರು. ಪಿಡಿಓ ಸಹನಾ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top