Slide
Slide
Slide
previous arrow
next arrow

ಶೌರ್ಯ ಜಾಗರಣೆ ರಥಯಾತ್ರೆಗೆ ಅದ್ಧೂರಿ ಸ್ವಾಗತ

300x250 AD

ಮುಂಡಗೋಡ: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಹಮ್ಮಿಕೊಂಡ ಶೌರ್ಯ ಜಾಗರಣೆ ರಥಯಾತ್ರೆಯು ಪಟ್ಟಣಕ್ಕೆ ಆಗಮಿಸಿದ್ದು, ಭಜರಂಗದಳದ ಕಾರ್ಯಕರ್ತರು, ವಿವಿಧ ಹಿಂದೂಪರ ಸಂಘಟನೆಯ ಪ್ರಮುಖರು, ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು.

ಗ್ರಾಮದೇವಿ ಶ್ರೀಮಾರಿಕಾಂಬಾ (ದ್ಯಾಮವ್ವ) ದೇವಿ ದೇವಸ್ಥಾನದ ಎದುರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರುದ್ರಮುನಿ ಸ್ವಾಮಿಗಳು ಪೂಜೆಯನ್ನು ನೆರವೇರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಹುಬ್ಬಳ್ಳಿಯ ವಿಶ್ವ ಹಿಂದು ಪರಿಷತ್‌ನ ಪ್ರಮುಖರಾದ ವಿನಾಯಕ ತಲಗೇರಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ ಹೆಬ್ಬಾರ, ಅಮಿತ್ ಶಿರಸಿ, ತಂಗಮ ಚಿನ್ನನ್, ಶಂಕರ ಲಮಾಣಿ, ಶೇಖರ ಲಮಾಣಿ, ಫಣಿರಾಜ ಹದಳಗಿ, ಲಕ್ಷ್ಮಣ ಲಮಾಣಿ, ಚಿದಾನಂದ ಹರಿಜನ, ಬಸವರಾಜ ಓಶೀಮಠ, ಉದಯ ಪಾಲೇಕರ, ಪ್ರಕಾಶ ಬಡಿಗೇರ, ನಿಲಪ್ಪ ಲಮಾಣಿ, ಸಂತೋಷ ತಳವಾರ, ಮಂಜು ಲಮಾಣಿ, ಮಂಗೇಶ ಲಮಾಣಿ, ಶಣ್ಮುಕ ಕೊಳುರ, ವಿವಿಧ ಹಿಂದು ಸಂಘಟನೆಯ ಪ್ರಮುಖರು, ಸಾರ್ವಜನಿಕರು ಇದ್ದರು.

Share This
300x250 AD
300x250 AD
300x250 AD
Back to top