Slide
Slide
Slide
previous arrow
next arrow

ಸಾಣಿಯಮ್ಮ ದೇವಸ್ಥಾನದಲ್ಲಿ ಹೂವಿನ ಪೂಜೆ

300x250 AD

ಕುಮಟಾ: ಪಟ್ಟಣದ ಹಳೇಹೆರವಟ್ಟಾದ ಶ್ರೀಸಾಣಿಯಮ್ಮ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಪಟ್ಟಣದ ಹಳೇ ಹೆರವಟ್ಟಾದಲ್ಲಿ ನೆಲೆಸಿರುವ ಶ್ರೀ ಸಾಣಿಯಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು. ದೇವಿಗೆ ಮಾಡಲಾದ ಪುಷ್ಪಾಲಂಕಾರ ಅತೀ ಸುಂದರವಾಗಿ ಕಾಣುತ್ತಿರುವುದರಿಂದ ಅಲಂಕಾರಭೂಷಿತ ದೇವಿಯ ದರ್ಶನ ಪಡೆಯಲು ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ಹಣ್ಣು-ಕಾಯಿ ಸೇವೆ ಸಲ್ಲಿಸಿ, ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

300x250 AD

ಮುತೈದೆಯರು ದೇವಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ಸೇವೆ ಗೈದರು. ರಾತ್ರಿ ನಡೆದ ಮಹಾ ಮಂಗಳಾರತಿ ಪೂಜೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಬಳಿಕ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು.

Share This
300x250 AD
300x250 AD
300x250 AD
Back to top