Slide
Slide
Slide
previous arrow
next arrow

ಉಚಿತ ಶಿಲೀಂಧ್ರನಾಶಕಕ್ಕೆ ಅರ್ಜಿ ಸಲ್ಲಿಕೆ ಆರಂಭ

300x250 AD

ಸಿದ್ದಾಪುರ: ತಾಲ್ಲೂಕಿನ ಎಲೆಚುಕ್ಕಿ ಬಾಧಿತ ಅಡಿಕೆ ಬೆಳೆಗಾರರಿಗೆ 2023-24ನೇ ಸಾಲಿನ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಅವಶ್ಯಕವಿರುವ ಶಿಲೀಂಧ್ರನಾಶಕವನ್ನು ಉಚಿತವಾಗಿ ವಿತರಿಸಲು ಮಾರ್ಗಸೂಚಿ ಹಾಗೂ ಅನುದಾನದ ಲಭ್ಯತೆ ಅನುಸಾರ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ರೈತರು ಅರ್ಜಿಯನ್ನು ಅಡಿಕೆ ಬೆಳೆ ನಮೂದಾಗಿರುವ ಇತ್ತೀಚಿನ ಪಹಣಿ ಪತ್ರಿಕೆ ಪ್ರತಿ, ಆಧಾರ್ ಪ್ರತಿ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯೊಂದಿಗೆ ಅ.11ರಿಂದ ಅರ್ಜಿ ಸಲ್ಲಿಸಿ ಔಷಧ ಪಡೆದುಕೊಳ್ಳಬಹುದಾಗಿದೆ. ಜೇಷ್ಠತೆ, ಮೀಸಲಾತಿ, ದಾಸ್ತಾನು ಲಬ್ಯತೆ ಮತ್ತು ಸಣ್ಣ ಮತ್ತು ಅತೀಸಣ್ಣ ರೈತರಿಗೆ ಯೋಜನೆ ಗರಿಷ್ಠ ಸೌಲಭ್ಯಗಳನ್ನು ವಿತರಿಸಲು ಇಲಾಖಾ ಮಟ್ಟದಲ್ಲಿ ಕ್ರಮವಹಿಸಲಾಗುವುದು.

ರೈತರು ಈಗಾಗಲೇ ಎಲೆಚುಕ್ಕಿ ಸಂಬಂಧ ಸ್ವಂತ ವೆಚ್ಚದಲ್ಲಿ ಸಿಂಪಡಿಸಿದ ಅನುಮೋದಿತ ಔಷಧ ನಗದು ಬಿಲ್ಲುಗಳನ್ನು ಮೇಲಿನ ದಾಖಲಾತಿಗಳೊಂದಿಗೆ ಒದಗಿಸಿದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ 30ರ ಸಹಾಯಧನವನ್ನು ಗರಿಷ್ಠ 4800 (ಹತ್ತು ಎಕರೆವರೆಗೂ) ಬ್ಯಾಂಕ್ ಖಾತೆಗೆ ಪಾವತಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಪಾನ್‌ಕಾರ್ಡ್ ಸಂಖ್ಯೆ (ಲಭ್ಯವಿದ್ದಲ್ಲಿ), ಚುನಾವಣಾ ಗುರುತಿನ ಚೀಟಿ ಸಂಖ್ಯೆಯ ವಿವರಗಳನ್ನು ದಾಖಲಿಸಬೇಕು.

300x250 AD

ಹೆಚ್ಚಿನ ವಿವರಗಳನ್ನು ತೋಟಗಾರಿಕೆ ಇಲಾಖೆಯ ಕಚೇರಿ ಸಂಖ್ಯೆಗಳಾದ 6360012441 / 7353346902 / 9535906269 / 9535490912 / 8310020952 / 9740636382ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top