Slide
Slide
Slide
previous arrow
next arrow

ಅರಣ್ಯ ಅತಿಕ್ರಮಣ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

300x250 AD

ಯಲ್ಲಾಪುರ: ತಾಲೂಕಿನ ಕಣ್ಣಿಗೇರಿಯ ಕೊಡಸೆ ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ 10 ಎಕರೆಯಷ್ಟು ಅರಣ್ಯ ಭೂಮಿಯಲ್ಲಿರುವ ಬೆಲೆಬಾಳುವ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಕುರುಹು ನಾಶ ಮಾಡಿ ಅತಿಕ್ರಮಣ ಮಾಡಲಾಗಿದೆ. ಈ ಬಗ್ಗೆ ಗಮನ ಹರಿಸದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರಪ್ರೇಮಿ ಶ್ರಮಶುದ್ಧಿನ್ ಮಾರ್ಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ಈ ಸ್ಥಳದಲ್ಲಿ ಕಡಿದ ಬೆಲೆಬಾಳುವ ಮರಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ, ಇನ್ನು ಕೆಲವು ಮರದ ತುಂಡುಗಳನ್ನು ನೆಲದಲ್ಲಿ ಹೂತುಹಾಕಲಾಗಿದೆ. ಈ ಪ್ರಕರಣವು ಅರಣ್ಯ ಇಲಾಖೆಗೆ ಬಹಳ ತಡವಾಗಿ ಗಮನಕ್ಕೆ ಬಂದಿದ್ದು, ನಂತರ ಪರಿಶೀಲಿಸಿದಾಗ ಮಣ್ಣಿನಲ್ಲಿ ಮುಚ್ಚಿಟ್ಟ ಮರದ ತುಂಡುಗಳು ಪತ್ತೆಯಾಗಿವೆ ಹಾಗೂ ಈ ತುಂಡುಗಳನ್ನು ಇಲಾಖೆ ಡಿಪೋಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಅಲ್ಲಿಯ ಬೆಲೆಬಾಳುವ ಮರದ ತುಂಡುಗಳು ಮಾರಾಟವಾಗಿದ್ದು, ಅದನ್ನು ಇನ್ನುವರೆಗೂ ಪತ್ತೆ ಮಾಡಿಲ್ಲ. 10 ಎಕರೆಯಷ್ಟು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಅಲ್ಲಿರುವ ಬೆಲೆಬಾಳುವ ಮರವುಗಳನ್ನು ಕಡಿದು ಸಾಕಾಣಿಕೆ ಮಾಡುವವರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

300x250 AD

ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಪ್ರಕರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ, ಕರ್ತವ್ಯ ಲೋಪದಡಿ ಅಮಾನತುಗೊಳಿಸಬೇಕು. ಒಂದು ವೇಳೆ ಈ ಅಧಿಕಾರಿಗಳು ಸಿಬ್ಬಂದಿಗಳು ಅರಣ್ಯ ಲೂಟಿಯಲ್ಲಿ ಭಾಗಿಯಾಗಿದ್ದರೇ ಭ್ರಷ್ಟಾಚಾರ ವಿರೋಧಿ ಕಾಯಿದೆ 1988 (ಆಂಟಿ ಕರಪ್ಷನ್ ಆಕ್ಟ್ 1988)ರ ಅನ್ವಯ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top