Slide
Slide
Slide
previous arrow
next arrow

ಗಾಂಧೀಜಿ ಕನಸು ನನಸು ಮಾಡುವತ್ತ ಹೆಗ್ಗಡೆಯವರ ನಡೆ: ಬಾಬು ನಾಯ್ಕ

300x250 AD

ಹೊನ್ನಾವರ: ಮಹಾತ್ಮ ಗಾಂಧಿಜಿಯವರು ಕಂಡ ಕನಸನ್ನು ಡಾ.ಡಿ.ವಿರೇಂದ್ರ ಹೆಗ್ಗಡೆಯವರು ನನಸು ಮಾಡಲು ಅನೇಕ ಕಾರ್ಯಕ್ರಮವನ್ನು ಯಶ್ವಸಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಬಾಳೆಗದ್ದೆ ವೆಂಕ್ರಟಮಣ ದೇವಾಲಯದಲ್ಲಿ ಆಯೋಜಿಸಿದ್ದ ಗಾಂಧಿಸ್ಮೃತಿ ಮತ್ತು ನವಜೀವನ ಸದಸ್ಯರಿಗೆ ಅಭಿನಂದನೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯವರು ಸ್ವಚ್ಚತೆ, ಮದ್ಯಪಾನ ಮುಕ್ತ ಸಮಾಜ, ರಾಮರಾಜ್ಯ ಕನಸನ್ನು ನನಸನ್ನು ಮಾಡಲು ಗ್ರಾಮಾಭಿವೃದ್ದಿ ಯೋಜನೆ ಮಧ್ಯವರ್ಜನ ಶಿಬಿರ ಸೇರಿದಂತೆ  ಹಲವು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯು ಯೋಜನೆಯು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತಿದೆ. ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ದಿಗೆ ಯೋಜನೆಯು ಆರ್ಥಿಕ ನೆರವು ನೀಡುತ್ತಿದೆ. ಇದುವರೆಗೆ ಯೋಜನೆಯ ಮೂಲಕ 1751 ಮದ್ಯವರ್ಜನ ಶಿಬಿರ ನಡೆಸಿದ್ದು, ಪಾಲ್ಗೊಂಡ 79% ಜನರು ಕುಡಿತ ಬಿಟ್ಟು ನವಜೀವನ ನಡೆಸುತ್ತಿದ್ದಾರೆ ಎಂದರು.

ಪ್ರಕೃತಿ ವಿಕೋಪದ ಸಮಯದಲ್ಲಿ ರಕ್ಷಣಿಗೆ ಧಾವಿಸಿದ ಶೌರ್ಯ ತಂಡದ ಸದಸ್ಯರಿಗೆ ಮತ್ತು ಮದ್ಯವ್ಯಸನ ತೊರೆದು ನವಜೀವನ ನಡೆಸುತ್ತಿರುವರಿಗೆ ಸನ್ಮಾನಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಸುಬ್ರಹ್ಮಣ್ಯ ಪಿ.ಯು ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಎಸ್.ಜಿ.ಭಟ್ ದುಶ್ಚಟಗಳಿಂದ ಸಮಾಜ ಮತ್ತು ಕುಟುಂಬದ ಮೇಲೆ ಆಗುವ ಪರಿಣಾಮದ ಕುರಿತು ಉಪನ್ಯಾಸ ನೀಡಿದರು. ಮಧ್ಯವರ್ಜನ ಶಿಬಿರದ ಮೂಲಕ ಪಾನಮುಕ್ತರಾದವರು ತಮ್ಮ ಅನಿಸಿಕೆ ಹಂಚಿಕೊ0ಡರು.

300x250 AD

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಪ.ಪಂ.ಸದಸ್ಯರಾದ ಶಿವರಾಜ ಮೇಸ್ತ ಮಾತನಾಡಿ ನಮ್ಮರಾಜ್ಯದ ಹಲವು ದೇವಾಲಯಗಳು ಇಂದು ಜಿರ್ಣೊದ್ದಾರಗೊಳ್ಳಲು ಯೋಜನೆಯ ಕೊಡುಗೆ ಅನನ್ಯವಾಗಿದೆ. ಮದ್ಯವ್ಯಸನದಿಂದ ಹಲವು ಜನರು ಕುಡಿತ ಬಿಟ್ಟು ಸಂತಸದಿಂದ ಜೀವನ ನಡೆಸುತ್ತಿದ್ದಾರೆ. ಅಂತವರನ್ನು ಇಂದು ಗುರುತಿಸಿ ಗೌರವಿಸುವ ಕಾರ್ಯ ಪ್ರಶಂಸನಾರ್ಹವಾಗಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಹೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ರಾಮಚಂದ್ರ ನಾಯ್ಕ, ರಾಜೇಶ್ವರಿ ನಾಯ್ಕ, ಗಜಾನನ ಶೆಟ್ಟಿ ಉಪಸ್ಥಿರಿದ್ದರು. ಯೋಜನಾಧಿಕಾರಿ ವಾಸಂತಿ ಅಮಿನ್ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನಯಾ ಶೇಟ್   ವಂದಿಸಿದರು. ಮೇಲ್ವಿಚಾರಕ ನಾಗರಾಜ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಮಧುರಾ ನಾಯ್ಕ ಪ್ರಾರ್ಥಿಸಿದರು.

Share This
300x250 AD
300x250 AD
300x250 AD
Back to top