ಶಿರಸಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ಟಿ.ಎಸ್.ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಂಗಳವಾರ ಮಾನಸಿಕ ಆರೋಗ್ಯದ ಜಾಗೃತಿ ಕುರಿತು ವಿಶೇಷ ಶಿಬಿರವನ್ನು ಏರ್ಪಡಿಸಲಾಗಿತ್ತು.
ಮನೋರೋಗದ ತಜ್ಞ ವೈದ್ಯ ಡಾ. ಗಿರಿಧರ ಎನ್.ಎಲ್ ಮಾತನಾಡಿ, ಮೈ ಮೇಲೆ ಬರುವುದು ಎಂಬ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡಿ, ಪ್ರಶ್ನೋತ್ತರದ ಮೂಲಕ ಶಿಬಿರಾರ್ಥಿಗಳ ಹಲವು ಸಂದೇಹಗಳನ್ನು ಹೋಗಲಾಡಿಸಿದರು. ಮಾಲಾ ಗಿರಿಧರ ಮಾನಸಿಕ ಆರೋಗ್ಯ ಕಾಪಾಡಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಶಿಬಿರದಲ್ಲಿ ಟಿಎಸ್‌ಎಸ್ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಎಂಇಎಸ್ ನರ್ಸಿಂಗ್ ಕಾಲೇಜು ಹಾಗೂ ಟಿಎಸ್‌ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದು, ಉಪಯುಕ್ತ ಮಾಹಿತಿ ಪಡೆದುಕೊಂಡರು. ಟಿ.ಎಸ್.ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ಜ್ಞಾನ ಪ್ರಕಾಶ ಕಾರಂತ ಶಿಬಿರದಲ್ಲಿ ಭಾಗವಹಿಸಿ, ಆತ್ಮಹತ್ಯೆ ಆಲೋಚನೆಯ ನಿಯಂತ್ರಣದ ಬಗ್ಗೆ ಮಾತನಾಡಿದರು.