Slide
Slide
Slide
previous arrow
next arrow

ಹಬ್ಬ,ಸಮಾರಂಭಗಳಲ್ಲಿ ಪಟಾಕಿ ನಿಷೇಧ: ಸಿಎಂ ಸಿದ್ದರಾಮಯ್ಯ ಆದೇಶ

300x250 AD

ಬೆಂಗಳೂರು: ಬೆಂಗಳೂರಿನಲ್ಲಿ 14 ಜೀವಗಳ ಸಾವಿಗೆ ಕಾರಣವಾದ ಅತ್ತಿಬೆಲೆ ಪಟಾಕಿ ದುರ್ಘಟನೆ ಬಳಿಕ ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, ರಾಜ್ಯದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಹಬ್ಬಗಳು, ಸಮಾರಂಭ, ಮೆರವಣಿಗೆಗಳು, ಮದುವೆಗಳನ್ನು ಪಟಾಕಿ ಸಿಡಿಸಿ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದ್ದಾರೆ.

ದೀಪಾವಳಿಯನ್ನು ಬೆಳಕಿನ ಜೊತೆಗೆ ಭರ್ಜರಿ ಪಟಾಕಿ ಸಿಡಿಸಿ ಆಚರಣೆ ಮಾಡಬೇಕು ಎಂದಕೊಂಡವರಿಗೂ ಸರ್ಕಾರ ಶಾಕ್ ನೀಡಿದ್ದು, ಜನರ ರಕ್ಷಣೆಗೆ ಕ್ರಮ ವಹಿಸಿದೆ. ಮುಂಬರಲಿರುವ ದೀಪಾವಳಿ ಹಬ್ಬದಲ್ಲಿ ಕೇವಲ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಪಟಾಕಿ ಸಿಡಿಸುವಾಗಿ ಕಡ್ಡಾಯವಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಆಗಬೇಕು. ಒಂದು ವೇಳೆ ಉಲ್ಲಂಘನೆ ಆದರೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಅವಕಾಶ: ಹಬ್ಬಗಳು, ರಾಜಕೀಯ ಕಾರ್ಯಕ್ರಮಗಳಲ್ಲಿ, ಗಣೇಶ ಹಬ್ಬದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೀಪಾವಳಿ ಹಬ್ಬದಲ್ಲಿ ಮಾತ್ರ ಪರಿಸರ ಸ್ನೇಹಿಯಾದ ಮಾಲಿನ್ಯಕಾರವಲ್ಲದ ಹಸಿರು ಪಟಾಕಿ ಹೊಡೆಯಲು ಅವಕಾಶ ಇದೆ. ಇದನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಇದರೊಂದಿಗೆ ಪಟಾಕಿ ಮಾರಾಟಗಾರರಿಗೆ ತಾಕೀತು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ನು ಮುಂದೆ ಪಟಾಕಿ ಮಾರಾಟ ಮಾಡಲು ಮಾರಾಟಗಾರರು ಪ್ರತಿ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕು. ಸರ್ಕಾರದ ಈ ಆದೇಶ ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

300x250 AD

Share This
300x250 AD
300x250 AD
300x250 AD
Back to top