Slide
Slide
Slide
previous arrow
next arrow

ಅಂಗನವಾಡಿ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಣೆ

300x250 AD

ಯಲ್ಲಾಪುರ: ಎಳೆಯ ಮನಸ್ಸುಗಳಿಗೆ ಹಸಿರಿನ ಬಗೆಗೆ ಪ್ರೀತಿ ಬೆಳೆಸುವ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯವಾದದ್ದು. ದಿನನಿತ್ಯ ತಾವು ಆಡಿ ನಲಿಯುವ ತಾಣ ಸ್ವಚ್ಛವಾಗಿಟ್ಟುಕೊಳ್ಳುವ ಕಾಳಜಿಯು ಮಕ್ಕಳ ಮನಸ್ಸಿನಲ್ಲಿ ಮೂಡಿದರೆ ಈ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ವಜ್ರಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್.ಬಂಟ್ ಹೇಳಿದರು.

ಅವರು ವಜ್ರಳ್ಳಿಯ ಅಂಗನವಾಡಿಯು ಮಕ್ಕಳಿಗೆ ಇಡಗುಂದಿ ವಲಯದ ವಜ್ರಳ್ಳಿ ಶಾಖೆಯಲ್ಲಿ ಜರುಗಿದ ವನ್ಯಜೀವಿ ಸಪ್ತಾಹ ನಿಮಿತ್ತ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು. ಆರೋಗ್ಯ ಪೂರ್ಣವಾದ ಪರಿಸರಕ್ಕೆ ನೈರ್ಮಲ್ಯ ಕಾಪಾಡುವುದು ಮುಖ್ಯ. ಎಳೆಯ ಮನಸ್ಸುಗಳಿಗೆ ಪರಿಸರ ಪ್ರೀತಿ ಜಾಗೃತವಾಗಬೇಕಾದರೆ ಅವರು ಬಳಸುವ ತಿಂಡಿ ತಿನಿಸುಗಳನ್ನು ಕಟ್ಟುವ ಪ್ಯಾಕೆಟ್ ಕಸ, ಕಡಿಮೆ ಬಳಕೆ, ತ್ಯಾಜ್ಯದ ವಿಲೇವಾರಿ, ಬಳಕೆ ಪರಾಣಾಮದ ಬಗೆಗೆ ಅರಿವು ಮೂಡಿಸಬೇಕಿದೆ ಎಂದರು.

300x250 AD

ಅರಣ್ಯ ಇಲಾಖೆಯ ವಜ್ರಳ್ಳಿ ಶಾಖೆಯ ಡಿಆರ್‌ಎಫ್‌ಓ ಎಚ್.ಸಿ.ಪ್ರಶಾಂತ ಮಾತನಾಡಿ, ಬದಲಾದ ಹವಾಮಾನದ ವೈಪರಿತ್ಯಗಳು ನಮ್ಮ ಜಾಗೃತಿ ಸ್ಥಿತಿಯಲ್ಲಿ ನಮ್ಮ ತೊಡಗುವಿಕೆಯನ್ನು ಅವಲೋಕಿಸುವಂತೆ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಮಕ್ಕಳ ಪಾಲಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಕೆಂಚಪ್ಪ, ಗೌಡಪ್ಪ ಸುಳ್ಳದ, ದತ್ತಾತ್ರೇಯ ತಳವಾರ, ಶಿವಣ್ಣ ಉಪಸ್ಥಿತರಿದ್ದರು. ವಜ್ರಳ್ಳಿಯ ಅಂಗನವಾಡಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ವಾಣಿಶ್ರೀ ನಾಯ್ಕ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ನಾಗವೇಣಿ ಶೇರುಗಾರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top