Slide
Slide
Slide
previous arrow
next arrow

ಭಟ್ಕಳದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ತಂಜೀಂ ಆಗ್ರಹ

300x250 AD

ಭಟ್ಕಳ: ಜಿಲ್ಲೆಯಿಂದ ಮಂಗಳೂರು, ಉಡುಪಿ ಹಾಗೂ ಕೇರಳ ಸಂಪರ್ಕಿಸುವ ವಿವಿಧ ಪ್ರಮುಖ ರೈಲುಗಳನ್ನು ಪಟ್ಟಣದಲ್ಲಿ ನಿಲುಗಡೆಗೆ ಆಗ್ರಹಿಸಿ ತಂಝೀಮ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರೈಲ್ವೆ ಸ್ಟೇಷನ್ ಮಾಸ್ಟರ್ ಮೂಲಕ ಕೇಂದ್ರ ರೈಲು ಸಚಿವರಿಗೆ ಮನವಿ ರವಾನಿಸಿದರು.

ಮಜ್ಲಿಸೆ ಇಸ್ಲಾಹ ವ ತಂಜೀA, ಭಾರತ ವಿಕಾಸ ಪರಿಷತ್, ಜೆಸಿಐ ಭಟ್ಕಳ ಸಿಟಿ, ರಾಬಿತಾ ಸೊಸೈಟಿ, ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಭಟ್ಕಳ ಪ್ರಮುಖ ಪ್ರವಾಸಿ ತಾಣವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದಾದ್ಯಂತ ಪ್ರವಾಸಿಗರು ಭಟ್ಕಳ, ಮುರುಡೇಶ್ವರವನ್ನು ಕಣ್ತುಂಬಿಕೊಳ್ಳಲು ಭಟ್ಕಳ ನಗರಕ್ಕೆ ಪ್ರತಿ ನಿತ್ಯ ಭೇಟಿ ನೀಡಲಿದ್ದಾರೆ. ಅಲ್ಲದೇ ಭಟ್ಕಳದ ಬಹುತೇಕರು ಗಲ್ಫ್ ಮತ್ತಿತರ ರಾಷ್ಟ್ರಗಳಲ್ಲಿ ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಜನರ ಅನುಕೂಲಕ್ಕಾಗಿ ಕೊಚ್ಚುವೇಲಿ ಭಾವನಗರ ಎಕ್ಸ್ಪ್ರೆಸ್, ಕೊಚ್ಚುವೇಲಿ ಗಂಗಾನಗರ ಎಕ್ಸ್ಪ್ರೆಸ್, ತ್ರಿವೆಂದ್ರ‍್ರಮ್ ವೆರಾವಲ್, ಗಾಂಧಿಧಾಮ್ ಎಕ್ಸ್ಪ್ರೆಸ್ ಮತ್ತು ವಾರದಲ್ಲಿ ಸಂಚರಿಸುವ ಎರ್ನಾಕುಲಂ ಪುಣೆ ಸೂಪರ್‌ಫಾಸ್ಟ್, ಕೊಚ್ಚುವೇಲಿ- ಮುಂಬೈ ಎಲ್‌ಟಿಟಿ, ಪ್ರತಿ ವಾರಕ್ಕೊಮ್ಮೆ ಸಂಚರಿಸುವ ತಿರುವನಂತಪುರಂ ನಿಜಾಮುದ್ದೀನ್ ರಾಜನಿಧಿ ಎಕ್ಸ್ಪ್ರೆಸ್ ರೈಲುಗಳು ಭಟ್ಕಳದಲ್ಲಿ ನಿಲುಗಡೆಯಾಗುತ್ತಿಲ್ಲ.

ಭಟ್ಕಳವು ಒಂದು ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದು, ಬೇರೆ ಬೇರೆ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ ಮತ್ತು ಇಲ್ಲಿಯ ಜನರು ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. ಅಲ್ಲದೇ ನಿತ್ಯವೂ ನೂರಾರು ಮಂದಿ ಉಡುಪಿ, ಮಂಗಳೂರು, ಕೇರಳಕ್ಕೆ ಆರೋಗ್ಯ, ವ್ಯಾಪಾರ, ಶಿಕ್ಷಣದ ಉದ್ದೇಶಕ್ಕಾಗಿ ಪ್ರಯಾಣಿಸುತ್ತಲೇ ಇರುತ್ತಾರೆ. ಮುಂಬೈ, ಪುಣೆಯಂತಹ ದೂರದ ಊರುಗಳಿಗೆ ತೆರಳಲು ಪ್ರಯಾಣಿಕರಿಗೆ ಅನೂಕೂಲವಾಗಲಿದೆ. ಭಟ್ಕಳದ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಬೇಕಾದರೆ ಉಡುಪಿ ಮತ್ತು ಮಂಗಳುರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ಎಲ್ಲಾ ರೈಲುಗಳು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಡಾ.ಅತಿಕರ‍್ರಹ್ಮಾನ್ ಮುನೀರಿ, ಭಟ್ಕಳ ನಾಗರೀಕ ಹಿತ ರಕ್ಷಣ ವೇದಿಕೆ ಹಾಗೂ ಸದ್ಭಾವನಾ ಮಂಚ್ ನ ಅಧ್ಯಕ್ಷ ಸತೀಶಕುಮಾರ ನಾಯ್ಕ, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ರುಕ್ನುದ್ದೀನ್, ಜೆಸಿಐನ ಅಬ್ದುಲ್ ಜಬ್ಬಾರ್, ಅಬ್ದುಲ್ ಹಸೀಬ್ ಅಸ್ಕೇರಿ, ಜಾವೀದ್ ಮುಕ್ರಿ, ಶಾಹೀನಾ ಶೇಖ್, ಇಕ್ಬಾಲ್ ಸಿಟಿ ಮೆಡಿಕಲ್ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top