Slide
Slide
Slide
previous arrow
next arrow

ವಾಕರಸಾ ಸಂಸ್ಥೆಯ 368 ಚಾಲಕ- ನಿರ್ವಾಹಕರಿಗೆ ವರ್ಗಾವಣೆ ಭಾಗ್ಯ

300x250 AD

ಕಾರವಾರ: ಪ್ರಸಕ್ತ ಸಾಲಿನ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ಹಾಗೂ ಪತಿ- ಪತ್ನಿ ಮತ್ತಿತರ ವಿಶೇಷ ಪ್ರಕರಣಗಳು ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 368 ಚಾಲಕ- ನಿರ್ವಾಹಕರುಗಳನ್ನು ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಆದೇಶ ಹೊರಡಿಸಿದ್ದಾರೆ.

ವಾಕರಸಾ ಸಂಸ್ಥೆಯಲ್ಲಿ ಕೆಲವು ವಿಭಾಗಗಳಲ್ಲಿ ಬಹಳಷ್ಟು ಚಾಲನಾ ಸಿಬ್ಬಂದಿಗಳ ಕೊರತೆ ಇದ್ದಾಗ್ಯೂ ಸಹ ವರ್ಗಾವಣೆ ನಿರೀಕ್ಷಣೆಯಲ್ಲಿದ್ದ ಅರ್ಹ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2023ರ ಸಾಲಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ವರ್ಗಾವಣೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆ.23ರಿಂದ ಸೆ.4ರವರೆಗೆ ಒಟ್ಟು 1003 ಚಾಲಕರು- ನಿರ್ವಾಹಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 727 ಅರ್ಹರಿದ್ದರು. ಸಂಸ್ಥೆಯ ಒಂಬತ್ತು ವಿಭಾಗಗಳಲ್ಲಿ ಚಾಲನಾ ಸಿಬ್ಬಂದಿಗಳ ಮಂಜೂರಾತಿ, ಲಭ್ಯತೆ ಹಾಗೂ ಖಾಲಿ ಸ್ಥಾನ ಪರಿಗಣಿಸಿ 309 ಸಾಮಾನ್ಯ, 34 ಪರಸ್ಪರ ಹಾಗೂ 25 ವಿಶೇಷ ಪ್ರಕರಣಗಳುಸೇರಿದಂತೆ ಒಟ್ಟು 368 ಅರ್ಹ ಚಾಲನಾ ಸಿಬ್ಬಂದಿಗಳನ್ನು ವರ್ಗಾಯಿಸಿ ಅ.6ರಂದು ಆದೇಶ ಹೊರಡಿಸಲಾಗಿದೆ.

ಆನ್ಲೈನ್ ಮೂಲಕ ಸಲ್ಲಿಕೆಯಾದ ಸಾಮಾನ್ಯ ವರ್ಗಾವಣೆ ಕೋರಿಕೆಗಳಲ್ಲಿ ಹೆಚ್ಚಿನವರು ಉತ್ತರ ಕನ್ನಡ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಬಯಸಿದ್ದಾರೆ. ಅದೇ ರೀತಿ ಬೇರೆ ವಿಭಾಗಗಳಿಂದ ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಕೋರಿದ್ದಾರೆ. ಉತ್ತರ ಕನ್ನಡ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದ ಹಾಗೂ ಬಾಗಲಕೋಟೆ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಲಭ್ಯತೆ ಹೆಚ್ಚಾಗಿದ್ದರಿಂದ ಅರ್ಜಿಗಳಲ್ಲಿ ಪ್ರಸುತ ವಿಭಾಗದಲ್ಲಿ 08 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸಿದ ಚಾಲನಾ ಸಿಬ್ಬಂದಿಗಳ ಕೋರಿಕೆಗಳನ್ನು ಮಾತ್ರ ಪರಿಗಣಿಸಲಾಗಿದೆ. ಹಾವೇರಿ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಾಗೂ ಗದಗ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇಲ್ಲದಿರುವುದರಿಂದ ಹಾವೇರಿಯಿಂದ ಗದಗ ವಿಭಾಗದ ಕೋರಿಕೆಗಳನ್ನು ಪರಿಗಣಿಸಿಲ್ಲ. ಪರಸ್ಪರ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳಲ್ಲಿ ಪರಿಗಣಿಸಲಾದ ನೌಕರರನ್ನು ಕೂಡಲೆ ಪ್ರಸ್ತುತ ಸ್ಥಳದಿಂದ ಬಿಡುಗಡೆಗೊಳಿಸಲಾಗುವುದು. ಆದರೆ, ಬಸ್‌ಗಳ ಕಾರ್ಯಾಚರಣೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಾವಣೆಯಲ್ಲಿ ಪರಿಗಣಿಸಲಾದ 309 ಚಾಲನಾ ಸಿಬ್ಬಂದಿಗಳ ತಕ್ಷಣ ಬಿಡುಗಡೆಗೊಳಿಸಲು ಸಾಧ್ಯವಾಗುವುದಿಲ್ಲ.

300x250 AD

ವಿಶೇಷವಾಗಿ ಉತ್ತರ ಕನ್ನಡ, ಹಾವೇರಿ, ಧಾರವಾಡ (ಗ್ರಾ), ಚಿಕ್ಕೋಡಿಯಂತಹ ಹೆಚ್ಚು ಚಾಲನಾ ಸಿಬ್ಬಂದಿಗಳ ಕೋರಿಕೆ ಇರುವ ವಿಭಾಗಗಳಿಗೆ ಚಾಲನಾ ಸಿಬ್ಬಂದಿಗಳನ್ನು ಪರ್ಯಾಯವಾಗಿ ಒದಗಿಸುವವರೆಗೆ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವುದು ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳು ಪ್ರಸ್ತುತ ವಿಭಾಗದಲ್ಲಿಯೇ ಮುಂದಿನ ಆದೇಶದವರೆಗೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

ಈ ವರ್ಗಾವಣೆ ಆದೇಶಗಳನ್ನು ಪಾರದರ್ಶಕವಾಗಿ ಮತ್ತು ಮೇಲ್ಕಂಡ ಮಾನದಂಡಗಳಂತೆ ಕೈಗೊಳ್ಳಲಾಗಿದ್ದು ಮೇಲೆ ತಿಳಿಸಿದ ಕಾರಣಗಳಿಗಾಗಿ ವರ್ಗಾವಣೆಗೆ ಅರ್ಹರಿದ್ದ ಕೆಲವೊಂದು ಚಾಲನಾ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲು ಸಾಧ್ಯವಾಗಿಲ್ಲ ಮತ್ತು ವರ್ಗಾವಣೆಗೊಂಡವರನ್ನು ತಕ್ಷಣವೇ ಬಿಡುಗಡೆಗೊಳಿಸಲು ಸಾಧ್ಯವಿರುವುದಿಲ್ಲ. ಸಿಬ್ಬಂದಿಗಳು ಸಹಕರಿಸಬೇಕು ಎಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಭರತ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top