Slide
Slide
Slide
previous arrow
next arrow

ಹೆಚ್‌ಎಸ್‌ಆರ್‌ಪಿ ಫಲಕ ಅಳವಡಿಕೆಗೆ ನ.17 ಕೊನೆಯ ದಿನ!

300x250 AD

ಕಾರವಾರ: ರಾಜ್ಯದಲ್ಲಿ ಏ.1, 2019ಕ್ಕಿಂತ ಮೊದಲು ನೊಂದಾಯಿಸಲ್ಪಟ್ಟಿರುವ ಹಳೆಯ ಎಲ್ಲಾ ಅಸ್ತಿತ್ವದಲ್ಲಿರುವ ವಾಹನಗಳು, ದ್ವಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಟ್ರಾಕ್ಟರ್, ಟ್ರೇಲರ್, ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ.

ಅಳವಡಿಕೆಯ ಕಾರ್ಯ ವಿಧಾನ: https://transport.Karnataka.Gov.in ಅಥವಾ www.siam.inಗೆ ಭೇಟಿ ನೀಡಿ ಮತ್ತು ಬುಕ್ ಹೆಚ್‌ಎಸ್‌ಆರ್‌ಪಿಯನ್ನು ಕ್ಲಿಕ್ ಮಾಡಿ, ತಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ, ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ, ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ, ಹೆಚ್‌ಎಸ್‌ಆರ್‌ಪಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿದರೆ (ನಗದು ರೂಪದಲ್ಲಿ ಮಾಡುವಂತಿಲ್ಲ) ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಪಿ.ಡಿ ರವಾನಿಸಲಾಗುತ್ತದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ, ತಮ್ಮ ವಾಹನದ ಯಾವುದೇ ತಯಾರಕ ಡೀಲರ್ ಸಂಸ್ಥೆಗೆ ಭೇಟಿ ನೀಡಿ, ವಾಹನ ಮಾಲೀಕರ ಕಛೇರಿ ಆವರಣ ಮನೆಯ ಸ್ಥಳದಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

300x250 AD

https://transport.Karnataka.Gov.in ಅಥವಾ www.siam.in ಮೂಲಕ ಮಾತ್ರ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಕಾಯ್ದಿರಿಸಿಕೊಳ್ಳಬೇಕು. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೋಲೋಗ್ರಾಮ್/ ಐಎನ್‌ಡಿ ಮಾರ್ಕ್/ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ ಹೆಚ್‌ಎಸ್‌ಆರ್‌ಪಿ/ ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು ಹೆಚ್‌ಎಸ್‌ಆರ್‌ಪಿ ಫಲಕಗಳಾಗಿರುವುದಿಲ್ಲ. ಹೆಚ್‌ಎಸ್‌ಆರ್‌ಪಿ ಅಳವಡಿಸದ ಹೊರತು ವಾಹನ ಮಾಲೀಕತ್ವ, ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು ರದ್ಧತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನದೊಳವರೆಗೆ ಮಾನ್ಯವಾದ ಹೆಚ್‌ಎಸ್‌ಆರ್‌ಪಿ ರಶೀದಿಯನ್ನು ಪ್ರಸ್ತುತ ಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ. ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ನವೆಂಬರ್ 17ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top