Slide
Slide
Slide
previous arrow
next arrow

ಕಲಾತಂಡಗಳಿಂದ ಅರ್ಜಿ ಆಹ್ವಾನ

300x250 AD

ಕಾರವಾರ: ಪ್ರಸಕ್ತ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸಂಘ- ಸಂಸ್ಥೆಗಳು ಪ್ರಾಯೋಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲು ಸೇವಾಸಿಂಧು ಅಂತರ್ಜಾಲದಲ್ಲಿ ಕಾರ್ಯಕ್ರಮದ 15 ದಿನ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ ಸಹಾಯಕ ನಿರ್ದೇಶಕರಿಂದ ಅನುಮೋದನೆ ಪಡೆದು, ಕಾರ್ಯಕ್ರಮವನ್ನು ಸೇವಾಸಿಂಧುವಿನಲ್ಲಿ ಸಲ್ಲಿಸಿದ ದಿನಾಂಕದಂದು ಏರ್ಪಡಿಸಬಹುದು.

ಕಲಾತಂಡಗಳನ್ನು ಇಲಾಖೆಯ ಪೋರ್ಟಲ್‌ನಲ್ಲಿ ಅಳವಡಿಸಿ ಕಲಾವಿದರ ವಿವರಗಳನ್ನು ಪರಿಶೀಲಿಸಿ, ಸರ್ಕಾರದ ಮಾರ್ಗಸೂಚಿಯಂತೆ ರೊಟೇಷನ್ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರಂಗಮಂದಿರ, ಮಾಲಾದೇವಿ ಮೈದಾನ, ಕಾರವಾರ, ಕಚೇರಿಯ ದೂರವಾಣಿ ಸಂಖ್ಯೆ: 08382-227084ಗೆ ಸಂಪರ್ಕಿಸಬಹುದು ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top