Slide
Slide
Slide
previous arrow
next arrow

ರಾಷ್ಟ್ರ ಮಟ್ಟದ ಇನ್ಸ್‌ಪೈರ್ ಅವಾರ್ಡ್ ಸ್ಪರ್ಧೆಗೆ ಜಿಲ್ಲೆಯ 6 ವಿದ್ಯಾರ್ಥಿಗಳು

300x250 AD

ಗೋಕರ್ಣ: ರಾಷ್ಟ್ರ ಮಟ್ಟದ ಇನ್ಸ್‌ಪೈರ್ ಅವಾರ್ಡ್ ಸ್ಪರ್ಧೆಗೆ ಜಿಲ್ಲೆಯಿಂದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಅ.9ರಂದು ನಡೆಯುವ ಎನ್‌ಎಲ್‌ಇಪಿಸಿ- 10 ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ವಿದ್ಯಾರ್ಥಿಗಳು ತೆರಳಿದ್ದಾರೆ.

ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಜನಾ ಪಟಗಾರ, ಪಂಚಲಿಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೂಮಿಕಾ ನಾಯ್ಕ, ಭರತನಳ್ಳಿ ಪ್ರಗತಿ ವಿದ್ಯಾಲಯದ ಕೀರ್ತನ ನಾಯ್ಕ, ಕಾನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಗನ್‌ಕುಮಾರ್ ನಾಯ್ಕ, ಹಿರೇಗುತ್ತಿ ನಿರ್ಮಲ ಹೃದಯ ಹೈಸ್ಕೂಲ್‌ನ ಸಂಭ್ರಮ ನಾಯಕ, ಹೊನ್ನಾವರ ಮಾರ್ಥೋಮ ಸೆಂಟ್ರಲ್ ಸ್ಕೂಲ್ ಭುವನ್ ಆರ್ ದೆಹಲಿಗೆ ತೆರಳುತ್ತಿದ್ದಾರೆ.

300x250 AD

ಈ ವಿದ್ಯಾರ್ಥಿಗಳು ದೆಹಲಿಗೆ ಪ್ರಯಾಣವನ್ನು ಬೆಳೆಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಕರೆದೊಯ್ಯಲು ತಂಡದ ಎಸ್ಕಾರ್ಟ್ ಶಿಕ್ಷಕರಾಗಿ ಆಗಿ ಆನಗೋಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ಆಚಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಈ ತಂಡಕ್ಕೆ ಕುಮಟಾ ಪ್ರಾಂಶುಪಾಲರಾದ ಎನ್.ಜಿ.ನಾಯ್ಕ, ಡಯಟ್ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್ಟ, ಯಲ್ಲಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಸಮನ್ವಯಾಧಿಕಾರಿ ಸಂತೋಷ್ ಜಿಗಳೂರುರವರು ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top