Slide
Slide
Slide
previous arrow
next arrow

ಸಹಕಾರಿ ಕ್ಷೇತ್ರ ಬೆಳೆದರೆ ಔದ್ಯೋಗಿಕ ಕ್ರಾಂತಿ: ಶಾಸಕ ದೇಶಪಾಂಡೆ

300x250 AD

ಹಳಿಯಾಳ: ಸಹಕಾರಿ ಸಂಘವು ಸಕ್ರಿಯವಾಗಿ ಕೃಷಿ, ಆಹಾರ, ಹಣಕಾಸು ಇತ್ಯಾದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತದೆ. ಸಹಕಾರ ರಂಗದಲ್ಲಿ ಬದ್ಧತೆ, ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಶ್ರಮ ಬಹಳ ಮುಖ್ಯ. ಸಹಕಾರಿ ಕ್ಷೇತ್ರ ಬೆಳೆದರೆ ಸಹಕಾರಿ ಕ್ಷೇತ್ರದಿಂದ ಔದ್ಯೋಗಿಕ ಕ್ರಾಂತಿಯನ್ನು ಮಾಡಬಹುದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ತಾಲೂಕಿನ ಕಾವಲವಾಡ ಗ್ರಾಮದಲ್ಲಿ ಶ್ರೀಸೋಮೇಶ್ವರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ವಾಣಿಜ್ಯ ಮಳಿಗೆಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸ್ಥಳೀಯ ಮುಖಂಡರು ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top