Slide
Slide
Slide
previous arrow
next arrow

ಹಾಡಗೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

300x250 AD

ಹೊನ್ನಾವರ: ಮಾನವ ಹಕ್ಕುಗಳ ರಕ್ಷಣಾ ಪರಿಷತ್ ತಾಲೂಕು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡಗೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪರಿಷತ್‌ನ ಜಿಲ್ಲಾ ವಕ್ತಾರ ನೀಲನ್ ಮಿರಾಂದ, ತಾಲೂಕಾ ಅಧ್ಯಕ್ಷ ಗಜಾನನ ಗೌಡ, ನಗರ ಅಧ್ಯಕ್ಷರಾದ ಸಂದೇಶ ನಾಯ್ಕ, ಶ್ರೀಕಾಂತ ನಾಯ್ಕ, ಪ್ರಕಾಶ ನಾಯ್ಕ, ಮೆಲ್ವಿನ್, ಮಿನಿನ್ ಮೊದಲಾದವರು ಶಾಲೆಯ ಮೈದಾನ ಮತ್ತು ಶಾಲಾ ಸುತ್ತಮುತ್ತಲಿನ ಭಾಗಗಳಲ್ಲಿ ಸ್ಚಚ್ಚತಾ ಕಾರ್ಯ ಕೈಗೊಂಡರು. ಮಾನವ ಹಕ್ಕುಗಳ ರಕ್ಷಣಾ ಪರಿಷತ್ತಿನ ಕಾರ್ಯಕ್ಕೆ ಎಸ್‌ಡಿಎಮ್‌ಸಿ ಅಧ್ಯಕ್ಷ ಸಂತೋಷ್ ಶೇಟ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

300x250 AD

ಮುಖ್ಯಶಿಕ್ಷಕರಾದ ಶಂಕರ ಮಡಿವಾಳ ಮಕ್ಕಳಿಗೆ ಜೀವನದ ಮೌಲ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಎಚ್‌ಆರ್‌ಪಿಸಿ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸಂಘಟನೆಯ ಕಾರ್ಯದ ಬಗ್ಗೆ ಶ್ಲಾಘಿಸಿ,ಶಾಲಾ ಮಕ್ಕಳಿಗೆ ಸ್ಫೂರ್ತಿಯ ನುಡಿಯನ್ನಾಡಿದರು. ಶಾಲೆಯ ಸಹ ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಂಘಟಕರಿಂದ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು.

Share This
300x250 AD
300x250 AD
300x250 AD
Back to top