Slide
Slide
Slide
previous arrow
next arrow

ಶಿರನಾಲಾ ಸರಕಾರಿ ಶಾಲೆಯಲ್ಲಿ ವನ್ಯಜೀವಿ ಸಪ್ತಾಹ ಆಚರಣೆ

300x250 AD

ಯಲ್ಲಾಪುರ: ತಾಲೂಕಿನ ಮಂಚಿಕೇರಿ ಅರಣ್ಯವಲಯದ, ಹಾಸಣಗಿ ಗ್ರಾ.ಪಂ. ವ್ಯಾಪ್ತಿಯ ಶಿರನಾಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.6ರಂದು 69ನೇ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಯಿತು.

ಅತಿಥಿಗಳಾಗಿದ್ದ ಬಿಳಕಿ ಡಿಆರ್‌ಎಫ್‌ಓ ಮಂಜುನಾಥ ಆಗೇರ, ವನ್ಯಪ್ರಾಣಿಗಳು ಮಾನುಷ್ಯರ ಬದುಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಇವುಗಳ ಸಂರಕ್ಷಣೆ ಬಹಳ ಅವಶ್ಯವಾಗಿದೆ. ಈಗಿನಿಂದಲೇ ಮಕ್ಕಳು ವನ್ಯಪ್ರಾಣಿಗಳ ಬಗ್ಗೆ ಪ್ರೀತಿ ಕಾಳಜಿ ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎಸ್.ಜಿ. ಭಟ್ಟ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುತ್ತವೆ ಎಂದರು.

300x250 AD

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಅಶಾ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ಶಿಕ್ಷಕ ಸತೀಶ ಶೆಟ್ಟಿ ವಂದಿಸಿದರು. ಜಕ್ಕೊಳ್ಳಿಯ ಉಪವಲಯಾರಣ್ಯಾಧಿಕಾರಿ ಜಗದೀಶ ಪಾಲಕನವರ ಪ್ರಾಸ್ತಾವಿಕ ಮಾತನ್ನಾಡಿದರು. ಗಸ್ತು ಅರಣ್ಯಪಾಲಕ ಪ್ರಶಾಂತ ಅಜರೆಡ್ಡಿ ಸಾಂದರ್ಭಿಕ ಮಾತನಾಡಿದರು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇಲಾಖೆಯ ಸಿಬ್ಬಂದಿ ಸತ್ಯಪ್ಪ ಉಪ್ಪಾರ್, ಎಸ್.ಡಿ.ಎಂ.ಸಿ. ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top