Slide
Slide
Slide
previous arrow
next arrow

ಯಲ್ಲಾಪುರದಲ್ಲಿ ನಾಳೆ ಶೌರ್ಯ ಜಾಗರಣ ರಥಯಾತ್ರೆ ಮೆರವಣಿಗೆ

300x250 AD

ಯಲ್ಲಾಪುರ: ಸಮಸ್ತ ಹಿಂದೂ ಬಾಂಧವರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿರುವ ‘ಶೌರ್ಯ ಜಾಗರಣ ರಥಯಾತ್ರೆ’ ಅ.8ರಂದು ಸಂಜೆ 7 ಗಂಟೆಗೆ ಕಣ್ಣಿಗೇರಿಯಲ್ಲಿ ಸ್ವಾಗತಿಸುವ ಮೂಲಕ ತಾಲೂಕಿಗೆ ಆಗಮಿಸಲಿದ್ದು, ಅ.9ರಂದು ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯಾದಲ್ಲಿ ಸಮಸ್ತ ಹಿಂದೂಗಳ ಆರಾಧ್ಯ ದೈವ ಶ್ರೀರಾಮಲಲ್ಲಾನ ದೇವಸ್ಥಾನ ನಿರ್ಮಾಣಗೊಂಡು ಜ.22ರಂದು ಮೂರ್ತಿ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ತಮಿಳುನಾಡಿನ ಉದಯ ಸ್ಟಾಲಿನ್ ಸನಾತನ ಹಿಂದೂ ಧರ್ಮ ನಾಶಮಾಡುವ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ಹಿಂದೂ ಧರ್ಮಿಯರನ್ನು ಒಗ್ಗೂಡಿಸಿ ಜಾಗೃತಿಗೊಳಿಸಲು ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತ್ರತ್ವದಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿ ಈ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದೆ ಎಂದರು.

ಅ.8ರಂದು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಲಿರುವ ಈ ರಥಯಾತ್ರೆ ಅ.9ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಗ್ರಾಮದೇವಿ ದೇವಸ್ಥಾನ, ನಂತರ ಇಡಗುಂದಿ, ಕವಡಿಕೆರೆ, ಮಧ್ಯಾಹ್ನ 3.30ಕ್ಕೆ ಮಾಗೋಡು ಕ್ರಾಸ್ ತಲುಪಲಿದೆ. 4 ಗಂಟೆಯಿಂದ ಶಾರದಾಂಬಾ ದೇವಸ್ಥಾನದಲ್ಲಿ ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸ್ವರಸ್ವತಿ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದ್ದು, ನಂತರ ಗಣಪತಿ ದೇವಸ್ಥಾನ, ಪ್ರಸನ್ನ ಗಣಪತಿ ದೇವಸ್ಥಾನ, ವೆಂಕಟ್ರಮಣ ಮಠ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ ಮಾರ್ಗವಾಗಿ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ. ಈ ರಥಯಾತ್ರೆಯಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

300x250 AD

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ನಾರಾಯಣ ನಾಯಕ, ಕಾರ್ಯದರ್ಶಿ ಅನಂತ ಗಾಂವ್ಕರ, ಪ್ರಮುಖರಾದ ರಾಮು ನಾಯ್ಕ, ಗಜಾನನ ನಾಯ್ಕ, ಗಿರೀಶ ಭಾಗ್ವತ, ಪ್ರಸಾದ ಹೆಗಡೆ ಇದ್ದರು.

Share This
300x250 AD
300x250 AD
300x250 AD
Back to top