Slide
Slide
Slide
previous arrow
next arrow

ಶಾಂತಿಕಾ0ಬಾ ದೇವಾಲಯದಲ್ಲಿ ನವರಾತ್ರಿ ಉತ್ಸವ; ಪೂರ್ವಭಾವಿ ಸಭೆ

300x250 AD

ಕುಮಟಾ: ತಾಲೂಕಿನ ಹೆಗಡೆಯ ಶ್ರೀಶಾಂತಿಕಾ0ಬಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.

ನವರಾತ್ರಿ ಉತ್ಸವದ ಸಂಬ0ಧ ಪ್ರಭಾಕರ ಹೆಗಡೆಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಲವು ಸಮಾಜದ ಪ್ರಮುಖರು ಪಾಲ್ಗೊಂಡು ಚರ್ಚಿಸಿದರು. ಶಕ್ತಿ ದೇವತೆಯಾದ ಗ್ರಾಮದೇವಿ ಶ್ರೀ ಶಾಂತಿಕಾ0ಬಾ ಪರಮೇಶ್ವರಿ ಮಾತೆಯ ನವರಾತ್ರಿ ಉತ್ಸವ ವಿಜೃಂಭಣೆಯಿ0ದ ಆಚರಿಸುವ ಬಗ್ಗೆ ಹಾಗೂ ಇದೇ ಮೊದಲ ಬಾರಿಗೆ ಈ ವರ್ಷದಿಂದ ದೇವಿಗೆ ಸಾರ್ವಜನಿಕವಾಗಿ ನವಚಂಡಿ ಹವನ ಸೇವೆ ಸಲ್ಲಿಸುವ ಬಗ್ಗೆ ಮತ್ತು ಪ್ರತಿದಿನ ರಾತ್ರಿ ಮಹಾಪೂಜೆ ನಂತರ ಸಾರ್ವಜನಿಕರಿಗೆ ಪ್ರಸಾದ ಭೋಜನ ವ್ಯವಸ್ಥೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.

ಅ.15ರಿಂದ 9 ದಿನ ನಡೆಯುವ ನವರಾತ್ರಿ ಉತ್ಸವದ ಪ್ರಸಾದ ಭೋಜನ ಹಾಗೂ ನವ ಚಂಡಿಹವನ ಸೇವೆಗೆ ದೇಣಿಗೆ ನೀಡುವವರು ಕೆನರಾ ಬ್ಯಾಂಕ್ ಹೆಗಡೆ ಶಾಖೆಯ ಖಾತೆ ಸಂಖ್ಯೆ: 110146823746 ಈ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಹಾಗೂ ಹೊರೆ ಕಾಣಿಕೆ ರೂಪದಲ್ಲಿ ಸೇವೆಸಲ್ಲಿಸುವವರು ದಾಮೋದರ ಪಟಗಾರ ಮತ್ತು ಶಾಂತಿಕಾ0ಬಾ ಮೆಡಿಕಲ್‌ನ ಶಿವಾನಂದ ದಿವಾಕರರವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

300x250 AD

ಸಭೆಯಲ್ಲಿ ಸಂಜಯ ಶಾನಭಾಗ, ಗ್ರಾ ಪಂ ಸದಸ್ಯರಾದ ಶಾಂತಾರಾಮ ನಾಯ್ಕ, ಮಂಜುನಾಥ ನಾಯ್ಕ, ರಾಮಕೃಷ್ಣ ಪಟಗಾರ, ರಾಜು ಮುಕ್ರಿ, ಗಣೇಶ ನಾಯ್ಕ, ವೆಂಕಟೇಶ ನಾಯ್ಕ, ವಕೀಲ ವಿನಾಯಕ ಪಟಗಾರ, ಮಂಜುನಾಥ ನಾಯ್ಕ, ಮೋಹನ ಶಾನಭಾಗ, ಗಜಾನನ ಹೆಗಡೆ, ಶ್ರೀಧರ ಹೆಗಡೆ, ದಾಮೋದರ ಪಟಗಾರ, ವಿನಾಯಕ ಶೆಟ್ಟಿ, ಅಶೋಕ ನಾಯ್ಕ, ತಿಮ್ಮಣ್ಣ ಗೌಡ, ಲಕ್ಷ್ಮಣ ಗೌಡ, ಶ್ರೀಧರ ಗೌಡ, ಪವನ ಪ್ರಭು, ಅಮರನಾಥ ಭಟ್ಟ, ಅನಂತ ನಾಯ್ಕ, ಶಿವಾನಂದ ದಿವಾಕರ, ಸದಾನಂದ ಶಾನಭಾಗ, ಮಧುಸೂಧನ ಶಾನಭಾಗ, ಉಮೇಶ ನಾಯ್ಕ, ದಿನೇಶ್ ನಾಯ್ಕ, ಗಣೇಶ ಕಾಮತ ಹಾಗೂ ಇತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top