Slide
Slide
Slide
previous arrow
next arrow

ಶಿಶುಪಾಲನ ಕೇಂದ್ರ ಮುಚ್ಚದಂತೆ ವಿವಿಧ ಸಂಘಟನೆಗಳಿ0ದ ಪ್ರತಿಭಟನಾ ಮೆರವಣಿಗೆ

300x250 AD

ಯಲ್ಲಾಪುರ: ಕಾರ್ಮಿಕರ ಮಕ್ಕಳು, ಅದರಲ್ಲೂ ಕಟ್ಟಡ ಕಾರ್ಮಿಕ ಮಕ್ಕಳ ಆರೈಕೆಗಾಗಿ ಇರುವ ಪಟ್ಟಣದ ನೂತನನಗರ ಮತ್ತು ಕಾಳಮ್ಮನಗರದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಆಹಾರ ಪೂರೈಕೆ ನಿಲ್ಲಿಸಿರುವುದು ಖಂಡನೀಯ. ಬೆಳಿಗ್ಗೆಯಿಂದ ಸಂಜೆವರೆಗೂ ಶಿಶುಪಾಲನಾ ಕೇಂದ್ರ ಸೇವೆ ಸಲ್ಲಿಸುವಂತಾಗಬೇಕೆ0ದು ಆಗ್ರಹಿಸಿ ಜಯ ಕರ್ನಾಟಕ ಹಾಗೂ ಇನ್ನಿತರ ಸಂಘಟನೆಯವರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿ ಆಗ್ರಹಿಸಿದ್ದಾರೆ.

ಹಿಂದೆ ಶಿಶು ಪಾಲನಾ ಕೇಂದ್ರಗಳು ಬೆಳಗ್ಗೆ 9:30 ಗಂಟೆಯಿ0ದ ಸಂಜೆ 5:00 ಗಂಟೆಯವರೆಗೆ ವಾರದ 6 ದಿನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದವು. 6 ತಿಂಗಳಿನಿ0ದ 6 ವರ್ಷದ ಮಕ್ಕಳಿಗೆ ಹಾಗೂ ಕೆಲಸಕ್ಕೆ ತೆರಳುವ ಮಕ್ಕಳ ಪಾಲಕರಿಗೆ ಈ ಕೇಂದ್ರಗಳು ಅನುಕೂಕರವಾಗಿದ್ದವು. ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿ ಬಳಸಿ ಹಣ್ಣು ಮೊಳಕೆ ಹೊಡೆದ ಕಾಳುಗಳ ಆಹಾರವನ್ನು ದಿನದ ಮೂರು ಸಮಯ ಮಕ್ಕಳಿಗೆ ನೀಡಲಾಗುತ್ತಿತ್ತು. ಇದೀಗ ಈ ಶಿಸು ಪಾಲನಾ ಕೇಂದ್ರಗಳನ್ನು ಮುಚ್ಚುವ ವ್ಯವಸ್ಥೆ ಸದ್ದಿಲ್ಲದೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿಗೆ ಪೂರಕವಾಗಿ ಮಧ್ಯಾಹ್ನ ನೀಡುತ್ತಿರುವ ಆಹಾರವನ್ನು ನಿಲ್ಲಿಸಲಾಗಿದೆ ಹಾಗೂ ಸಂಜೆಯವರೆಗೂ ತೆರದಿರುವ ಶಿಶು ಪಾಲನಾ ಕೇಂದ್ರ ಮಧ್ಯಾಹ್ನದ ವೇಳೆಗೆ ಮುಚ್ಚಲಾಗುತ್ತಿದೆ ಎಂದು ದೂರಿದರು.

ಕೂಲಿ ಕಾರ್ಮಿಕರು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮತ್ತು ಪಾಲಕರಿಗೆ ವರದಾನವಾಗಿರುವ ಶಿಶು ಪಾಲನಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೆ ಮುಚ್ಚಬಾರದು ಹಿಂದಿನ0ತೆ ಮುಂದುವರೆಸಿಕೊ0ಡು ಹೋಗಬೇಕು ಎಂದು ಮುಖ್ಯಮಂತ್ರಿ ರವಾನಿಸಿರುವ ಮನವಿಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ವಿಲ್ಸನ್ ಪರ್ನಾಂಡಿಸ್, ತಾಲೂಕಾ ಅಧ್ಯಕ್ಷ ಕೆ.ಎಫ್.ಕಂಬಳಿನವರ, ಕರ್ನಾಟಕ ಯುವ ಸೇನೆ ಹಾಗೂ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ನಾಯ್ಕ, ಗಣೇಶ ಆರ್.ಪಾಟಣಕರ, ಮಂಜುನಾಥ ಎ.ರಾಯ್ಕರ, ಸಂಜನಾ ಮರಾಟೆ, ತಬಸ್ಸುಮ್, ಮಾರುತಿ ಭೋವಿವಡ್ಡರ್, ಜಾನಕಿ ಪಂಡರಾಪುರ, ಪ್ರಭಾವತಿ ಪಂಡರಾಪುರ, ಯಾಸ್ಮಿನ್ ಅಬ್ದುಲ್ ರವುಫ್, ಮಂಜುಶ್ರೀ ಎಸ್ ಹೇಂದ್ರೆ, ಸುಮಾ ಭಟ್ಕಿ, ಸುನಿಲ್ ಭಟ್ಕಿ, ಅನ್ನಪೂರ್ಣ ಮುಂತಾದವರು ಆಗ್ರಹಿಸಿದ್ದಾರೆ.

300x250 AD

ಮನವಿ ನೀಡುವ ಪೂರ್ವದಲ್ಲಿ ಯಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಶಿಶುಪಾಲನಾ ಕೇಂದ್ರ ಬೇಕೇ ಬೇಕು ಎನ್ನುವ ಬಿತ್ತಿಪತ್ರ ಹಿಡಿದು ಹಲವಾರು ಜನ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಎಂ.ಗುರುರಾಜ್ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು.

Share This
300x250 AD
300x250 AD
300x250 AD
Back to top