Slide
Slide
Slide
previous arrow
next arrow

ಮಿರ್ಜಾನ್‌ನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ: ಪ್ರಕರಣ ದಾಖಲು

300x250 AD

ಕುಮಟಾ: ತ್ರಿವರ್ಣ ಧ್ವಜದ ಅಶೋಕ ಚಕ್ರ ತೆಗೆದು ಅರ್ಧ ಚಂದ್ರದೊಂದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ತಾಲೂಕಿನ ಮಿರ್ಜಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈದ್ ಮಿಲಾದ್ ವೇಳೆ ಮೆರವಣಿಗೆ ನಡೆಸಿದ್ದ ಅನ್ಯಕೋಮಿನವರು ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಅರ್ಧ ಚಂದ್ರದೊಂದಿಗೆ ಉರ್ದು ಬರವಣಿಗೆ ಹಾಕಿ ಅಪಮಾನ ಮಾಡಿದ್ದಾರೆ. ಇತ್ತೀಚೆಗೆ ಶಿರಸಿ ಹಾಗೂ ಯಲ್ಲಾಪುರದಲ್ಲಿಯೂ ಸಹ ಇಂಥ ಪ್ರಕರಣವಾಗಿತ್ತು.

ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ನಡೆಸಿದ್ದ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕುಮಟಾ  ಪೊಲೀಸರು ಪ್ರಕರಣ ದಾಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ‌.

300x250 AD

ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top