Slide
Slide
Slide
previous arrow
next arrow

24*7 ನೀರು ವಿತರಣೆಯಲ್ಲಿನ ಸಮಸ್ಯೆ ಬಗೆಹರಿಸಲು ಜಯ ಕರ್ನಾಟಕ ಆಗ್ರಹ

300x250 AD

ಹಳಿಯಾಳ: 24*7 ನೀರು ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಆಗ್ರಹಿಸಿದ್ದಾರೆ.

ಕಳೆದ ಆರು ತಿಗಳಿನಿಂದ 24*7 ನೀರಿನ ಸರಿಯಾಗಿ ನೀಡದೆ ದಿನಕ್ಕೆ ಒಂದು ತಾಸು ನೀಡುತ್ತಿದ್ದು ಅದಕ್ಕೆ ಸರಿಯಾದ ಸಮಯವಿಲ್ಲದೆ ತಮ್ಮ ಮನಸಿಗೆ ಬಂದ ರೀತಿಯಲ್ಲಿ ಸಮಯಕ್ಕೆ ನೀರು ಬೀಡುತ್ತಿದ್ದು ಇದಕ್ಕೆ ಸಾರ್ವಜನಿಕರಿ ತುಂಬಾ ತೊಂದೆರೆ ಆಗುತ್ತಿದ್ದು ಈ ಮೊದಲು ದಿನಕ್ಕೆ 1 ತಾಸು ನೀರು ಬಿಟ್ಟು ವರ್ಷಕ್ಕೆ 540 ರೂ ತೆಗೆದುಕೊಳ್ಳುತ್ತೀದ್ದರು. ಈಗ 1 ತಾಸು ನೀರನ್ನು ಬಿಟ್ಟು ತಿಂಗಳಿಗೆ ರೂ 500/- 600/-, 800/- ಬಿಲ್ಲನ್ನು ನೀಡುತ್ತಿದ್ದು ಈ ಬಿಲ್ಲನ್ನು ಸಹ ಹೆಚ್ಚಿಗೆ ಆಗುತ್ತಾ ಇದ್ದು ಮೊದಲಿನಂತೆ 1 ತಾಸು ನೀರಿಗೆ ವರ್ಷಕ್ಕೆ 540/- ರೂ ತೆಗೆದುಕೊಂಡರೆ ಇದನ್ನು ಮುಂದುವರೆಸಿಕೊ0ಡು ಹೋಗಬೇಕು. ಇಲ್ಲವಾದರೆ ದಿನದ 24 ತಾಸು ನೀರನ್ನು ನೀಡಿ ನೀರಿನ ಪ್ರಮಾಣದ ತಿಂಗಳ ಬಿಲ್ಲನ್ನು ನೀಡಬೇಕು ಎಂದು ಆಗ್ರಹಿಸಿದರು.

ಅದೇ ತರಹ ದಾಂಡೇಲಿ ತಾಲೂಕಿನ ಕಾಳಿ ನದಿ ನೀರನ್ನು ಪಕ್ಕದ ಧರವಾಡ ಜಿಲ್ಲೆ ಅಳ್ನಾವರ ತಾಲೂಕಿಗೆ ಸತತವಾಗಿ ದಿನದ 24 ತಾಸು ನೀರನ್ನು ಒದಗಿಸುತ್ತಿದ್ದು, ನಗರಕ್ಕೆ ದಿನಕ್ಕೆ 1 ತಾಸು ನೀರನ್ನು ನೀಡುತ್ತಾ ಇದ್ದು ಅದರಲ್ಲಿ ಯಾವ ಅನಾನುಕೂಲತೆ ಇದೆ ಎಂಬುದನ್ನು ಅರಿತು ತಾವುಗಳು ದಿನದ 24 ತಾಸು ನೀರಿನ್ನು ಒದಗಿಸಿ ಕೊಡಬೇಕು ಒಂದು ವೇಳೆ 24 ತಾಸು ನೀರನ್ನು ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಜೊತೆಗೊಡಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಪುರಸಭೆ ಎದುರಗಡೆ ಧರಣಿಯನ್ನು ಮಾಡಲಾಗುವುದು. ಕಾರಣ ಆದಷ್ಟು ಬೇಗನೆ ಹಳಿಯಾಳ ನಗರಕ್ಕೆ ಆಗುತ್ತಿರುವ 24 ತಾಸು ನೀರಿನ ಸಮಸ್ಯೆಯನ್ನು ಸರಿಪಡಿಸಬೇಕಾಗಿ ಆಗ್ರಹಿಸಿದರು.

300x250 AD

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕು ಅಧ್ಯಕ್ಷ ಶಿರಾಜ ಮುನವಳ್ಳಿ, ತಾಲೂಕು ಉಪಾಧ್ಯಕ್ಷ ಗೋಪಾಲ ಗರಗ, ತಾಲೂಕು ಕಾರ್ಯದರ್ಶಿ ಮಹೇಶ ಹೊಲಕೊಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top