Slide
Slide
Slide
previous arrow
next arrow

ಅಂಕೋಲಾ ಸಿಟಿ ಲಯನ್ಸ್ನಿಂದ ಯಶಸ್ವಿ ಮೆಗಾ ಆರೋಗ್ಯ ಶಿಬಿರ

300x250 AD

ಅಂಕೋಲಾ: ನಗರದ ಕೆಎಲ್‌ಇ ನರ್ಸಿಂಗ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಮತ್ತು ಕಸ್ತೂರಬಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಮೆಗಾ ಆರೋಗ್ಯ ಶಿಬಿರ ನಡೆಯಿತು.

ಶಿಬಿರದಲ್ಲಿ ಮಣಿಪಾಲ ಕೆಎಂಸಿಯ ಡಾ.ಕುಂದನಾ ರೆಡ್ಡಿ, ಡಾ.ಕೆ.ನಿಶಾಂತ, ಡಾ.ನರೇಶ ಬಿ., ಡಾ.ತನ್ಯಾ, ಡಾ.ತೇಜಸ್ವಿನಿ, ಡಾ.ತೇಜಸ್ ಎಸ್., ಡಾ.ಮೋಹಿತ ಅಗ್ರವಾಲ್, ಡಾ.ಅಕ್ಷತಾ, ಡಾ.ದಿವ್ಯಾ ಜೋಸೆಫ್ ಇವರು ಅಂಕೋಲಾದ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಸುಮಾರು 432 ವೈದ್ಯಕೀಯ ಪ್ರಕರಣಗಳನ್ನು ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆ ನೀಡಿದರು. ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ವಿಜಯದೀಪ ಮಣಿಕೋಟ ರವರು ತಜ್ಞ ವೈದ್ಯರ ಸಲಹೆಯಂತೆ ಅಗತ್ಯ ಉಚಿತ ಔಷಧಿಗಳನ್ನು ವಿತರಿಸಿದರು.

ಮೆಗಾ ಕ್ಯಾಂಪ್ ಸಾಂಕೇತಿಕವಾಗಿ ಔಷಧಿ ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ‘ಅಖಿಲ ಭಾರತ ಹಿರಿಯ ನಾಗರಿಕರ ವೇದಿಕೆ’ ಅಧ್ಯಕ್ಷೆ ಎಂ.ಜೆ.ಎಫ್ ಪದ್ಮಾ ಕಿಣಿಯವರು ನೆರವೇರಿಸಿ ಕಸ್ತೂರಬಾ ಆಸ್ಪತ್ರೆ ವಿವಿಧ ತಜ್ಞ ವೈದ್ಯರಿಂದ ಪರೀಕ್ಷಿಸಲ್ಪಡುವ ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಗ್ರಾಮೀಣ ಜನತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಪಡೆಯಬೇಕೆಂದರು. ಲಯನ್ಸ್ ಅಧ್ಯಕ್ಷ ಡಾ. ವಿಜಯದೀಪ ಪ್ರಾರಂಭಿಕ ಹಂತದಲ್ಲಿರುವ ರೋಗ ಲಕ್ಷಣವನ್ನು ಪರೀಕ್ಷಿಸಿಕೊಂಡು ಉತ್ತಮ ಆರೋಗ್ಯ ಕುರಿತು ಜಾಗೃತಿ ವಹಿಸುವಂತೆ ಸೂಚಿಸಿದರು.

300x250 AD

ವೇದಿಕೆಯಲ್ಲಿ ಹಿರಿಯ ವೈದ್ಯರು ಕಾರ್ಯದರ್ಶಿ ಪ್ರದೀಪ ರಾಯ್ಕರ, ಖಜಾಂಚಿ ಉದಯಾನಂದ ನೇರಲಕಟ್ಟೆ ಉಪಸ್ಥಿತರಿದ್ದರು. ನಾರಾಯಣ ಎಚ್.ನಾಯ್ಕ ಕಾರ್ಯಕ್ರಮ ನೆರವೇರಿಸಿದರು. ಉದಯಾನಂದ ನೇರಲಕಟ್ಟೆ ಸರ್ವರ ಉಪಕಾರ ಸ್ಮರಣೆ ಮಾಡಿದರು. ವಂದಿಗೆಯ ಗ್ರಾಮ-1 ಕೇಂದ್ರದಿAದ ‘ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್’ ನೋಂದಾಯಿಸುವ ಕಾರ್ಯನಿರ್ವಹಿಸಿದರು.

ಕೆ.ಎಲ್.ಇ ನರ್ಸಿಂಗ್ ವಿದ್ಯಾರ್ಥಿಗಳು ಚಿಕಿತ್ಸಾಪೂರ್ವ ರಕ್ತದೊತ್ತಡ ಮತ್ತು ರಕ್ತ ಪರೀಕ್ಷೆಯ ಕಾರ್ಯವನ್ನು ನೆರವೇರಿಸಿದರು. ನೀತಾ ಮಹಾಲೆ, ಅಶ್ವಿನಿ ಸಾಮಂತ, ಮಾಯಾ ಶೆಟ್ಟಿಯವರು ಫಲಾನುಭವಿಗಳ ನೋಂದಣಿ ಕಾರ್ಯನಿರ್ವಹಿಸಿದರು. ಮೆಗಾ ಕ್ಯಾಂಪ್ ಯಶಸ್ವಿಯಾಗಿ ವಿವಿಧ ವಿಭಾಗಗಳಲ್ಲಿ ಮೋಹನ ಶೆಟ್ಟಿ, ಕಮಲಾಕರ ಬೋರಕರ, ರೋಶ್ನಾ ವಿಜಯದೀಪ, ಪ್ರಿಯಾ ರಾಯ್ಕರ, ಸುರೇಶ ಡಿ. ನಾಯ್ಕ, ಶಾಂತಾರಾಮ ಶಿರೋಡ್ಕರ, ಶಶಿಧರ ಶೇಣ್ವಿ, ಸುಬ್ರಹ್ಮಣ್ಯ ರೇವಣಕರ, ಗಣಪತಿ ಹೆಗಡೆ, ವಿಜಯಾ ಭಟ್, ಕೃಷ್ಣಾನಂದ ಶೆಟ್ಟಿ ಆರೋಗ್ಯ ಶಿಬಿರದ ಯಶಸ್ವಿಗಾಗಿ ಶ್ರಮಿಸಿದರು.

Share This
300x250 AD
300x250 AD
300x250 AD
Back to top