Slide
Slide
Slide
previous arrow
next arrow

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ವೈದ್ಯ

300x250 AD

ಭಟ್ಕಳ: ಸಚಿವ ಮಂಕಾಳ ವೈದ್ಯ ಇಲ್ಲಿನ ಮಿನಿವಿಧಾನ ಸೌಧದಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲನ್ನ ಸ್ವೀಕರಿಸಿ ಜನರ ಸಮಸ್ಯೆಗೆ ಪರಿಹಾರ ನೀಡಿದರು.

ಸಚಿವರು ತಾಲೂಕು ಆಡಳಿತ ಸೌಧಕ್ಕೆ ಬರುವ ಮಾಹಿತಿ ತಿಳಿದ ಕ್ಷೇತ್ರದ ಸಾವಿರಾರು ಜನರು ತಮ್ಮ ಅಹವಾಲುಗಳನ್ನು ಹಿಡಿದು ಸರದಿ ಸಾಲಿನಲ್ಲಿ ಸಜ್ಜಾಗಿ ನಿಂತಿದ್ದರು. ಈ ಸಮಯದಲ್ಲಿ ಸಚಿವರು ಜನರ ಅಹವಾಲುಗಳನ್ನು ಆಲಿಸಿ ಆದಷ್ಟು ಬೇಗನೆ ಪರಿಹರಿಸುವ ಭರವಸೆಯನ್ನು ನೀಡಿದರು. ಈ ವೇಳೆ ಸಾರ್ವಜನಿಕಾಗಿ ಯಾವುದಾದರೂ ದೂರುಗಳಿದ್ದರೆ ತಿಳಿಸಿಬಹುದು ಎಂದು ಸಚಿವರು ತಿಳಿಸಿದ್ದು ಈ ಹಿನ್ನೆಲೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ತಾಲೂಕ ಘಟಕದ ಅಧ್ಯಕ್ಷ ನಾಗೇಂದ್ರ ನಾಯ್ಕ ಹೇರೂರು ಹಾಗೂ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹೆಬಳೆ ಸಚಿವರಲ್ಲಿ ಕೆಲದೂರುಗಳನ್ನು ಮುಂದಿಟ್ಟರು.

ಕಳೆದ 15 ವಷfದಿಂದ ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬೀಡು ಬಿಟ್ಟ ಅಧಿಕಾರಿಗಳು ವರ್ಗಾವಣೆ ಆಗದೇ ಇದ್ದು ಅವರನ್ನು ಶೀಘ್ರವಾಗಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಇನ್ನು ಹೆಬಳೆ ಭಾಗದಲ್ಲಿ ಪಿ.ಡಬ್ಲೂಡಿ ಇಲಾಖೆಯಿಂದ ಕಾಮಗಾರಿಗಳ ನಾಮಫಲಕವು ಅಸಮರ್ಪಕವಾಗಿದ್ದು ಇದರಿಂದ ಈ ಹಿಂದೆ ದೊಡ್ಡ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕೆಂದು ಪ್ರಸ್ತಾಪಿಸಿದರು.

300x250 AD

ಇನ್ನು ತಾಲ್ಲೂಕು ಆಡಳಿತ ಸೌದದ ಕಟ್ಟಡದ ಹೊರಗೆಡೆ ಪಹಣಿ ಪತ್ರಿಕೆ ವಿತರಣೆಯಲ್ಲಿ ದಲ್ಲಾಳಿಗಳು ಲಾಬಿ ಜೋರಾಗಿದೆ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಸರದಿ ಸಾಲಿನಲ್ಲಿಯೇ ಪಹಣಿ ಪತ್ರಿಕೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ಪಡಿಸಿದರು.

ಸದ್ಯ ತಾಲೂಕು ಆಡಳಿತ ಸೌಧಕ್ಕೆ ಖಾಸಗಿ ಕಟ್ಟಡದಲ್ಲಿರುವ ಸರಕಾರಿ ಇಲಾಖೆಯ ಕಚೇರಿಗಳನ್ನು ತಕ್ಷಣಕ್ಕೆ ಸ್ಥಳಾಂತರಿಸಬೇಕು ಎಂದರು. ಇದೇ ವೇಳೆ ಮುಂಡಳ್ಳಿ ಪಂಚಾಯತ ಸದಸ್ಯ ರಾಜು ನಾಯ್ಕ ಮೀನುಗಾರಿಕೆ ಇಲಾಖೆಯಲ್ಲ ದೋಣಿ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಈಗಾಗಲೇ ದೂರು ನೀಡಿದ್ದು ಈ ಕುರಿತು ಮೀನುಗಾರಿಕೆ ಸಚಿವರು ಗಮನ ಹರಿಸಿ ತನಿಖೆ ನಡೆಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.

Share This
300x250 AD
300x250 AD
300x250 AD
Back to top