ಅಂಕೋಲಾ: ತಾಲೂಕಿನ ಬಳಲೆಯ ಗ್ರಾಮದವರಾದ ಉಪವಲಯ ಅರಣ್ಯಾಧಿಕಾರಿ ಮೋಹನ ನಾಯ್ಕ ಅವರಿಗೆ ಮುಖ್ಯಮಂತ್ರಿ ಬಂಗಾರದ ಪದಕ ಲಭಿಸಿರುವುದಕ್ಕೆ ನಾಮಧಾರಿ ಈಡಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಗೌರವಾಧ್ಯಕ್ಷ ಸುರೇಶ ನಾಯ್ಕ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದೇ ಒಂದು ಸಾಹಸವಾಗಿದೆ. ಇವುಗಳ ಮಧ್ಯೆ ಮೋಹನ ನಾಯ್ಕರಂತಹ ಪ್ರಾಮಾಣಿಕ, ದಕ್ಷ, ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ನೀಡುತ್ತಿರುವುದು ನಿಜಕ್ಕು ಹೆಮ್ಮೆಯ ಸಂಗತಿ. ಮುಂದೆಯೂ ಕೂಡ ಇವರಿಗೆ ಶ್ರೇಯಸ್ಸು ಸಿಗುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿದ ಮೋಹನ ಎಸ್. ನಾಯ್ಕ ಮಾತನಾಡಿ, ನನಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಬಂದಿರುವುದು ಅತ್ಯಂತ ಹೆಮ್ಮೆಯಾಗಿದೆ. 35 ವರ್ಷಗಳ ಸುದೀರ್ಘ ಸೇವೆಯನ್ನು ಗಮನಿಸಿ ನನಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಾನು ಮಾಡಿದ ಪುಣ್ಯ ಎಂದು ಭಾವಿಸುತ್ತೇನೆ ಎಂದರು.
ಸಂಘದ ಉಪಾಧ್ಯಕ್ಷ ರಮೇಶ ವಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ಜಯಂತ ನಾಯ್ಕ, ಮಹಾಬಲೇಶ್ವರ ನಾಯ್ಕ ಮಂಜಗುಣಿ, ಗುತ್ತಿಗೆದಾರ ನಾಗೇಶ ನಾಯ್ಕ ಹನುಮಟ್ಟಾ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಪಿ.ಕೆ. ನಾಯ್ಕ, ವೆಂಕಟ್ರಮಣ ನಾಯ್ಕ, ಮಂಜುನಾಥ ನಾಯ್ಕ, ಮಾದೇವಿ ನಾಯ್ಕ, ವನಿತಾ ನಾಯ್ಕ, ಆನಂದು ನಾಯ್ಕ, ಅರುಣ ನಾಯ್ಕ ಇತರರಿದ್ದರು. ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಸ್ವಾಗತಿಸಿದರು. ಕೃಷ್ಣಾ ನಾಯ್ಕ ನಿರ್ವಹಿಸಿದರು. ವಿನಾಯಕ ನಾಯ್ಕ ವಂದಿಸಿದರು.