ಅಂಕೋಲಾ: ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಮತ್ತು ಮಹಾಮಾಯಾ ದೇವಸ್ಥಾನ ಅಂಕೋಲಾ ಇವರ ಆಶ್ರಯದಲ್ಲಿ ಡಾ. ರಾಮಮನೋಹರ ಲೋಹಿಯಾ ಅಕ್ಯುಪ್ರೇಷರ್ ಮತ್ತು ಸುಝೋಕ ಮೆಗ್ನೇಟ್ ಮತ್ತು ವೈಬ್ರೇಶನ್ ಚಿಕಿತ್ಸೆ ಸಂಶೋಧನಾ ಕೇಂದ್ರ ಜೋದಪುರ (ರಾಜಸ್ತಾನ) ತಂಡದವರು ಆಯೋಜಿಸಿದ ಶಿಬಿರ ವಿದ್ಯುಕ್ತವಾಗಿ ಚಾಲನೆಗೊಂಡಿತ್ತು.
ಅರ್ಬನ್ ಬ್ಯಾಂಕ್ ಅಧ್ಯಕ್ಷರು ಮತ್ತು ಮಾಜಿ ಪುರಸಭೆಯ ಅಧ್ಯಕ್ಷರು ಆದ ಭಾಸ್ಕರ ನಾರ್ವೇಕರ ಔಷಧಿ ಸಸ್ಯಕ್ಕೆ ನೀರೆರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಸಿಟಿ ಲಯನ್ಸ್ ಕ್ಲಬಿನ ಕಾರ್ಯ ಪ್ರಶಂಸನೀಯ ಎಂದರು. ಅಧ್ಯಕ್ಷತೆ ವಹಿಸಿದ ಡಾ. ವಿಜಯದೀಪ ಮಣಿಕೋಟ ಶಿಬಿರಕ್ಕೆ ಆಗಮಿಸಿದ ಡಾ.ಆರ್.ಕೆ.ಶರ್ಮಾ ಮತ್ತು ಡಾ.ಪ್ರಕಾಶ ಝಾಖರ ಅವರನ್ನು ಮತ್ತು ಆಗಮಿಸಿದ ಶಿಬಿರಾರ್ಥಿಗಳನ್ನು ಸ್ವಾಗತಿಸಿ ಆರೋಗ್ಯವೇ ಭಾಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು. ಶಿಬಿರದ ಪರವಾಗಿ ಡಾ.ಆರ್.ಕೆ.ಶರ್ಮಾ ಪ್ರಾತಕ್ಷಿಕೆಯೊಂದಿಗೆ ಅಕ್ಯುಪ್ರೇಷರ್ ಕುರಿತು ವಿವರಿಸಿದರು. ಈ ಶಿಬಿರ 3ರಿಂದ 8 ನೇ ತಾರೀಖಿನಿವರೆಗೆ ನಡೆಯಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಎಂ.ಜೆ.ಎಫ್ ಪ್ರದೀಪ ರಾಯ್ಕರ, ಕೋಶಾಧ್ಯಕ್ಷ ಉದಯಾನಂದ ನೇರಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ನಾಯ್ಕ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಮೋಹನ ಶೆಟ್ಟಿ, ಕಮಲಾಕರ ಬೋರಕರ, ಸುರೇಶ ಜಿ.ನಾಯ್ಕ, ಗಣಪತಿ ಹೆಗಡೆ, ವಿಜಯ ಭಟ್, ಅಶ್ವಿನಿ ಸಾಮಂತ, ನಾಗರಾಜ ಮಹಾಲೆ, ನೀತಾ ಮಹಾಲೆ, ಶಶಿಧರ ಶೇಣ್ವಿ, ಡಾ.ಶಾಂತಾರಾಮ ಶಿರೋಡ್ಕರ ಮತ್ತು ಶಿಬಿರಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.